ADVERTISEMENT

ಕೊರೊನಾ: ಚೀನೀಯರಿಗೆ ಇ–ವೀಸಾ ಸ್ಥಗಿತ

ಪಿಟಿಐ
Published 2 ಫೆಬ್ರುವರಿ 2020, 18:46 IST
Last Updated 2 ಫೆಬ್ರುವರಿ 2020, 18:46 IST
   

ನವದೆಹಲಿ: ಭಾರತಕ್ಕೆ ಬರುವ ಚೀನಾ ಪ್ರಜೆಗಳು ಹಾಗೂ ಚೀನಾದಲ್ಲಿರುವ ವಿದೇಶಿಯರಿಗೆ ನೀಡಲಾಗುತ್ತಿದ್ದ
ಇ–ವೀಸಾ ಸೌಲಭ್ಯವನ್ನು ಭಾನುವಾರದಿಂದ ಅನ್ವಯವಾಗುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಇಲ್ಲಿರುವ ಭಾರತದ ರಾಯಭಾರ ಕಚೇರಿ ಪ್ರಕಟಿಸಿದೆ.

‘ಈಗಾಗಲೇ ಪಡೆದಿರುವ ಇ–ವೀಸಾಗಳಿಗೆ ಸಿಂಧುತ್ವ ಇರುವುದಿಲ್ಲ’ ಎಂದೂ ಮೂಲಗಳು ಸ್ಪಷ್ವಪಡಿಸಿವೆ. ಭಾರತಕ್ಕೆ ಭೇಟಿ ನೀಡಲೇಬೇಕಾದಂತಹ ಅನಿವಾರ್ಯತೆ ಎದುರಿಸುತ್ತಿರುವವರು ಬೀಜಿಂಗ್‌ನಲ್ಲಿರುವ ರಾಯಭಾರ ಕಚೇರಿ, ಶಾಂಘೈ ಅಥವಾ ಗ್ವಾಂಝೌನಲ್ಲಿರುವ ಭಾರತೀಯ ಕಾನ್ಸುಲೇಟ್‌ ಕಚೇರಿಗಳನ್ನು ಸಂಪರ್ಕಿಸುವಂತೆಯೂ ತಿಳಿಸಲಾಗಿದೆ.

ಈ ನಡುವೆ, ಫಿಲಿಪ್ಪೀನ್ಸ್‌ನಲ್ಲಿ ಈ ಸೋಂಕಿನಿಂದಾಗಿ 44 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿ
ದ್ದಾರೆ. ಚೀನಾದ ಹೊರಗೆ ವರದಿಯಾಗಿರುವ ಮೊದಲ ಸಾವುಇದಾಗಿದೆ. ಈಗಾಗಲೇ ಚೀನಾದಲ್ಲಿ
304 ಜನರು ಈ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ ಒಟ್ಟು 305ಕ್ಕೇರಿದಂತಾಗಿದೆ.

ADVERTISEMENT

ಭಾರತೀಯರ ಸ್ಥಳಾಂತರ: ಕೊರೊನಾ ವೈರಸ್‌ ಸೋಂಕು ಪ್ರಸರಣದಿಂದ ತತ್ತರಿಸಿರುವ ಚೀನಾದ ವುಹಾನ್‌ನಿಂದ 323 ಭಾರತೀಯರನ್ನು ಹೊತ್ತ ಏರ್‌ ಇಂಡಿಯಾದಎರಡನೇ ವಿಮಾನ ಭಾನುವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿಯಿತು.

ಎರಡನೇ ಪ್ರಕರಣ: ಕೇರಳದಲ್ಲಿ ಈ ಸೋಂಕು ಕಾಣಿಸಿಕೊಂಡಿರುವ ಎರಡನೇ ಪ್ರಕರಣ
ವರದಿಯಾಗಿದೆ. ಇದರೊಂದಿಗೆ ಈ ರಾಜ್ಯದಲ್ಲಿ ಒಟ್ಟು ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.