ADVERTISEMENT

‘ಸೋಂಕಿತರ ಸಂಖ್ಯೆ ಇಳಿಕೆ’, ಗುಣಮುಖರಾದವರ ಪ್ರಮಾಣ ಹೆಚ್ಚು

ಪಿಟಿಐ
Published 13 ಅಕ್ಟೋಬರ್ 2020, 20:37 IST
Last Updated 13 ಅಕ್ಟೋಬರ್ 2020, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ‘ದೇಶದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆವರೆಗೆ 55,342 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರತಿದಿನದ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 92,830 ಇತ್ತು. ಅಕ್ಟೋಬರ್ 2ನೇ ವಾರದಲ್ಲಿ ಈ ಸಂಖ್ಯೆ 70,114ಕ್ಕೆ ಇಳಿದಿದೆ.ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪಾಲಿಸುತ್ತಿರುವ ಕಾರಣ, ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಸೋಂಕಿತರ ಪತ್ತೆ, ಕಣ್ಗಾವಲು, ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವ ಕಾರಣ ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸಚಿವಾಲಯವು ಹೇಳಿದೆ.

ಸಾವು: 60ರ ಒಳಗಿನವರ ಪ್ರಮಾಣ ಶೇ 47

ADVERTISEMENT

ಕೋವಿಡ್‌ನಿಂದಾಗಿ ಮೃತಪಟ್ಟವರಲ್ಲಿ ಸುಮಾರು ಅರ್ಧದಷ್ಟು ಜನರು 60ರ ಒಳಗಿನ ವಯೋಮಾನದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 10 ತಿಂಗಳಲ್ಲಿ ಕೋವಿಡ್‌ನಿಂದಾದ 1.10 ಲಕ್ಷ ಸಾವಿನ ಪ್ರಕರಣಗಳನ್ನು ವಿಶ್ಲೇಷಿಸಿ ಈ ಅಂಶವನ್ನು ಗುರುತಿಸಲಾಗಿದೆ.

ಮೃತರಲ್ಲಿ ಸುಮಾರು ಶೇ 35ರಷ್ಟು ಮಂದಿ ಆರ್ಥಿಕವಾಗಿ ಸಕ್ರಿಯವಾಗಿರುವ 45–60ರ ವಯೋಮಾನದವರು; ಇನ್ನುಳಿದ ಶೇ 10ರಷ್ಟು ಮಂದಿ 24–44ರ ವಯಸ್ಸಿನವರು ಎಂದು ಸಚಿವಾಲಯ ತಿಳಿಸಿದೆ. ಮೃತರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ 18–25ರ ವಯಸ್ಸಿನವರಿದ್ದರೆ ಸಾವಿರಕ್ಕೂ ಹೆಚ್ಚಿನವರು 17ರೊಳಗಿನ ಮಕ್ಕಳು. ಯುವ ಜನರಿಗೂ ಕೋವಿಡ್‌ ಅಪಾಯಕಾರಿ ಆಗಬಲ್ಲುದು ಎಂಬುದನ್ನು ಈ ಅಂಕಿ ಅಂಶವು ತೋರಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.