ADVERTISEMENT

ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ ಸಾಧಾರಣ ಮಳೆ: ಐಎಂಡಿ

ಪಿಟಿಐ
Published 30 ಸೆಪ್ಟೆಂಬರ್ 2021, 13:35 IST
Last Updated 30 ಸೆಪ್ಟೆಂಬರ್ 2021, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈ ವರ್ಷದ ನಾಲ್ಕು ತಿಂಗಳ (ಜೂನ್-ಸೆಪ್ಟೆಂಬರ್) ಮಳೆಗಾಲದಲ್ಲಿ ದೇಶದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.

ʼಪರಿಮಾಣಾತ್ಮಕವಾಗಿಹೇಳುವುದಾದರೆ2021ರ ಜೂನ್‌1ರಿಂದ ಸೆಪ್ಟೆಂಬರ್‌30ರವರೆಗಿನ ಮಳೆಗಾಲದಲ್ಲಿ87 ಸೆಂಟಿ ಮೀಟರ್‌ ಮಳೆಯಾಗಿದೆ. 1961-2010ರ ದೀರ್ಘಾವಧಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ88 ಸೆಂಟಿ ಮೀಟರ್‌ ಆಗಿದೆʼ ಎಂದು ಐಎಂಡಿ ನಿರ್ದೇಶಕ ಎಂ.ಮಹಾಪಾತ್ರ ತಿಳಿಸಿದ್ದಾರೆ.

ಜೂನ್‌-ಸೆಪ್ಟೆಂಬರ್‌ ಅವಧಿಯಲ್ಲಿನೈರುತ್ಯ ಮಾನ್ಸೂನ್‌ ಮಳೆಯು ಸಾಧಾರಣ ಮಟ್ಟದಲ್ಲಿ ಸುರಿದಿದೆ. ಇದರೊಂದಿಗೆ ಸತತ ಮೂರನೇ ವರ್ಷಸಾಧಾರಣ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಂತಾಗಿದೆ.2019 ಮತ್ತು 2020ರಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.