ADVERTISEMENT

1800 ಕೆ.ಜಿ ಮಾದಕ ವಸ್ತು ವಶ

ಪಿಟಿಐ
Published 13 ಮೇ 2019, 18:45 IST
Last Updated 13 ಮೇ 2019, 18:45 IST

ನವದೆಹಲಿ/ನೋಯ್ಡಾ: ಗ್ರೇಟರ್‌ ನೋಯ್ಡಾದ ಮನೆಯೊಂದರಿಂದ1,800 ಕೆ.ಜಿ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳ (ಎನ್‌ಸಿಬಿ) ತಿಳಿಸಿದೆ.

‘ಸಾಮಾನ್ಯವಾಗಿ ಇಷ್ಟು ದೊಡ್ಡ ಪ್ರಮಾಣದ ಮಾದಕವಸ್ತು, ಕಾರ್ಖಾನೆಗಳಲ್ಲಷ್ಟೆ ಪತ್ತೆಯಾಗುತ್ತಿತ್ತು. ಆದರೆ ವಸತಿ ಪ್ರದೇಶದಲ್ಲಿ ಪತ್ತೆಯಾಗಿರುವುದು ದೇಶದಲ್ಲಿ ಇದೇ ಮೊದಲು’ ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ. ಮೂವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳ ಹೇಳಿದೆ.

ಮಾದಕವಸ್ತು ಪತ್ತೆಯಾದ ಮನೆ ಐಪಿಎಸ್‌ ಅಧಿಕಾರಿ ಡಿಪಿಎನ್‌ ಪಾಂಡೆ ಎನ್ನುವವರಿಗೆ ಸೇರಿದ್ದು. ಅವರು ಮನೆಯನ್ನು ಬಾಡಿಗೆಗೆ ನೀಡಿದ್ದರು ಎಂದು ತಿಳಿದುಬಂದಿದೆ.

ADVERTISEMENT

‘ಪ್ರಕರಣದ ಬಗ್ಗೆ ಆಘಾತವಾಗಿದೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸುತ್ತೇನೆ’ ಎಂದು ಪಾಂಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.