ADVERTISEMENT

ಅನುಮತಿಯಿಲ್ಲದೆ ರಾಜ್ಯದಿಂದ ಹೊರಹೋಗದಂತೆ ಜಿಗ್ನೇಶ್‌ಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 15:59 IST
Last Updated 3 ಜೂನ್ 2022, 15:59 IST
ಜಿಗ್ನೇಶ್‌ ಮೆವಾನಿ
ಜಿಗ್ನೇಶ್‌ ಮೆವಾನಿ   

ಅಹಮದಾಬಾದ್‌: ತನ್ನ ಅನುಮತಿಯಿಲ್ಲದೆ ಗುಜರಾತ್‌ನಿಂದ ಹೊರಹೋಗಬಾರದು ಎಂದು ಪಕ್ಷೇತರ ಶಾಸಕ ಜಿಗ್ನೇಶ್‌ ಮೆವಾನಿ ಅವರಿಗೆ ಮೆಹ್ಸಾನಾದ ಸೆಷನ್ಸ್‌ ನ್ಯಾಯಾಲಯವು ನಿರ್ಬಂಧ ಹೇರಿದೆ.

2017ರಲ್ಲಿ ಪೊಲೀಸರ ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜಿಗ್ನೇಶ್‌ ಮತ್ತು ಇತರ ಒಂಬತ್ತು ಮಂದಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಅನುಮತಿಯಿಲ್ಲದೆ ರಾಜ್ಯ ತೊರೆಯಬಾರದು ಎಂಬ ಷರತ್ತು ವಿಧಿಸಿದೆ. ಅಲ್ಲದೆ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ಅವರಿಗೆ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಮ್ಯಾಜಿಸ್ಟೀರಿಯಲ್‌ ನ್ಯಾಯಾಲಯವು ಮೇ 5ರಂದು ಜಿಗ್ನೇಶ್‌ ಮತ್ತು ಇತರ ಒಂಬತ್ತು ಮಂದಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.