ADVERTISEMENT

ಮಲ್ಯ ವಿರುದ್ಧದ ತನಿಖೆಗೆ ಸಹಕರಿಸಲು ಅಮೆರಿಕಕ್ಕೆ ಸಿಬಿಐ ಪತ್ರ

ಪಿಟಿಐ
Published 22 ಸೆಪ್ಟೆಂಬರ್ 2020, 12:56 IST
Last Updated 22 ಸೆಪ್ಟೆಂಬರ್ 2020, 12:56 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ವಿರುದ್ಧದ ಬ್ಯಾಂಕ್‌ ವಂಚನೆ ಪ್ರಕರಣದ ತನಿಖೆಗೆಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಸಹಕಾರ ನೀಡುವಂತೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಅಮೆರಿಕಕ್ಕೆ ಲಿಖಿತ ಮನವಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ ನೆರವು ಕೋರಿ ಅಮೆರಿಕಕ್ಕೆ ಮನವಿ ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು.ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಯೇಂದ್ರ ಸಿ. ಜಗದೇಲ್ ಅವರು ಸೋಮವಾರ ಸಹಕಾರ ನೀಡುವಂತೆ ಮನವಿ ಪತ್ರ ನೀಡಿದ್ದಾರೆ.

‘ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಕೆಲವು ಸಾಕ್ಷ್ಯಗಳನ್ನು ಕಲೆ ಹಾಕುವುದು ಅವಶ್ಯಕವಾಗಿದೆ. ಹಾಗೂ ಈಗಾಗಲೇ ಅಮೆರಿಕದಿಂದ ಪಡೆದಿರುವ ಪುರಾವೆಗಳ ಬಳಕೆಗೆ ಅಟಾರ್ನಿ ಜನರಲ್‌ ಅವರ ಅನುಮತಿ ಅಗತ್ಯವಿದೆ’ ಎಂದುಕೇಂದ್ರ ತನಿಖಾ ದಳ ಹೇಳಿದೆ.

ADVERTISEMENT

ಮಲ್ಯ ಮತ್ತು ಅವರ ಮಾಲೀಕತ್ವದ ಕಿಂಗ್‌ಫಿಶರ್‌ ಅಮೆರಿಕದ ಬ್ಯಾಂಕ್‌ಗಳಿಂದ ಸಾಲ ಪಡೆದು ಹಣ ದುರುಪಯೋಗ ಪಡೆಸಿಕೊಂಡಿರುವ ಬಗ್ಗೆ ತನಿಖೆ ನಡೆಸಲು ಸಿಬಿಐ ಈ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.