ADVERTISEMENT

ಎನ್‌ಐಎ ಅಧಿಕಾರಿ, ಪತ್ನಿ ಹತ್ಯೆ, ಇಬ್ಬರು ಅಪರಾಧಿಗಳಿಗೆ ಮರಣದಂಡನೆ

ಪಿಟಿಐ
Published 22 ಮೇ 2022, 9:29 IST
Last Updated 22 ಮೇ 2022, 9:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಿಜ್ನೋರ್ (ಉತ್ತರ ಪ್ರದೇಶ):ಆರು ವರ್ಷಗಳ ಹಿಂದೆ ನಡೆದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಿರಿಯ ಅಧಿಕಾರಿ ತೆಂಜಿಲ್‌ ಅಹ್ಮದ್ ಹಾಗೂ ಅವರ ಪತ್ನಿ ಫಾರ್ಜಾನಾ ಅವರ ಹತ್ಯೆಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ.‌

2016 ಏಪ್ರಿಲ್‌ 2ರ ಮಧ್ಯರಾತ್ರಿ ಈ ಹತ್ಯೆ ನಡೆದಿತ್ತು. ಅಪರಾಧಿಗಳಾದ ಮುನೀರ್‌ ಹಾಗೂ ಆತನ ಸಹಚರ ರಾಯನ್‌ ಎಂಬುವವರಿಗೆಬಿಜ್ನೋರ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯ್ ಕುಮಾರ್‌ ಅವರು ಗಲ್ಲು ಶಿಕ್ಷೆ ವಿಧಿಸಿದ್ದಾರೆ.

ಈ ಬಗ್ಗೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ವರಿಷ್ಠಾಧಿಕಾರಿ ಧರಂವೀರ್ ಸಿಂಗ್‌, ‘ಬಿಜ್ನೋರ್‌ನಸಯೋಹರಾದಲ್ಲಿ ನಡೆದ ವಿವಾಹ ಸಮಾರಂಭದಿಂದ ಸಹಸ್‌ಪುರದ ತಮ್ಮ ಮನೆಗೆ ಮಕ್ಕಳೊಂದಿಗೆ ಮರಳುತ್ತಿದ್ದಾಗತೆಂಜಿಲ್‌ ಅಹ್ಮದ್ ಮತ್ತು ಅವರ ಪತ್ನಿಫಾರ್ಜಾನಾ ಅವರನ್ನು ದುಷ್ಕರ್ಮಿಗಳು ರಸ್ತೆಯ ಮೋರಿ ಬಳಿ ಕಾರಿಗೆ ಹೊಂಚು ಹಾಕಿಗುಂಡಿಕ್ಕಿ ಕೊಂದಿದ್ದರು. ತನಿಖೆಯ ಬಳಿಕ ಇತರ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.