ADVERTISEMENT

ಬಿಆರ್‌ಎಸ್ ಶಾಸಕರ ಖರೀದಿ: ಆರೋಪಿಗಳನ್ನು ರಿಮ್ಯಾಂಡ್‌ಗೆ ನೀಡುವ ಮನವಿ ತಿರಸ್ಕಾರ

ಪಿಟಿಐ
Published 29 ಅಕ್ಟೋಬರ್ 2022, 2:15 IST
Last Updated 29 ಅಕ್ಟೋಬರ್ 2022, 2:15 IST

ಹೈದರಾಬಾದ್‌: ಬಿಆರ್‌ಎಸ್‌ ಶಾಸಕರ ಖರೀದಿ ಆರೋಪ ಪ್ರಕರಣದಲ್ಲಿ ಸೈಬರಾಬಾದ್‌ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳನ್ನು ರಿಮ್ಯಾಂಡ್‌ಗೆ ನೀಡಬೇಕು ಎನ್ನುವ ಮನವಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು ತಿರಸ್ಕರಿಸಿದೆ.

ಬಂಧನಕ್ಕೂ ಮೊದಲು ಮೂವರಿಗೆ ನೋಟಿಸ್‌ ನೀಡಿಲ್ಲ ಎಂದು ಕಾರಣ ನೀಡಿರುವ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.

ಶಾಸಕ ರೋಹಿತ್‌ ರೆಡ್ಡಿ ಅವರು ನೀಡಿರುವ ದೂರಿನ ಅನ್ವಯ, ರಾಮಚಂದ್ರ ಭಾರತಿ@ ಸತೀಶ್‌ ಶರ್ಮಾ, ನಂದ ಕುಮಾರ್‌ ಮತ್ತು ಸಿಂಹಯಾಜಿ ಸ್ವಾಮಿ ಅವರ ವಿರುದ್ಧ ಅ.26ರಂದು ಪ್ರಕರಣ ದಾಖಲಾಗಿತ್ತು.

ADVERTISEMENT

ಈ ಮೂವರನ್ನು ಗುರುವಾರ ಬಂಧಿಸಲಾಗಿತ್ತು. ಅದೇ ದಿನ ರಾತ್ರಿ ವೇಳೆಗೆ ಭ್ರಷ್ಟಾಚಾರ ನಿಗ್ರಹ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಮೂವರ ವಿರುದ್ಧ ಸೆಕ್ಷನ್ 41ರ ಅಡಿ ನೋಟಿಸ್‌ ನೀಡುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿ, ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.