ADVERTISEMENT

Covid-19 India Update: ದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿ

ಪಿಟಿಐ
Published 8 ಜೂನ್ 2021, 5:36 IST
Last Updated 8 ಜೂನ್ 2021, 5:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ 63 ದಿನಗಳ ಬಳಿಕ ಮೊದಲ ಬಾರಿ ಒಂದು ಲಕ್ಷಕ್ಕಿಂತ ಕಡಿಮೆ ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 4.62ಕ್ಕೆ ಇಳಿಕೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಭಾರತದಲ್ಲಿ ಒಂದೇ ದಿನ 86,498 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು 66 ದಿನಗಳಲ್ಲಿ ವರದಿಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ 2,123 ಮಂದಿ ಮೃತಪಟ್ಟಿದ್ದು, ಇದು 47 ದಿನಗಳಲ್ಲಿ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ಮೃತರ ಸಂಖ್ಯೆಯು 3,51,309ಕ್ಕೆ ಹೆಚ್ಚಿದೆ.

‘ಸೋಮವಾರ 18,73,485 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈವರೆಗೆ ದೇಶದಲ್ಲಿ 36,82,07,596 ಪರೀಕ್ಷೆಗಳನ್ನು ನಡೆಸಲಾಗಿವೆ. ದೇಶದಲ್ಲಿ ಸತತ 15 ದಿನಗಳಿಂದ ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 10ಕ್ಕಿಂತ ಕಡಿಮೆಯಿದೆ’ ಎಂದು ಸಚಿವಾಲಯವು ತಿಳಿಸಿದೆ.

ADVERTISEMENT

ಸಕ್ರಿಯ ಪ್ರಕರಣಗಳ ಸಂಖ್ಯೆಯೂ 13,03,702ಕ್ಕೆ ಇಳಿಕೆಯಾಗಿವೆ. ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 4.50ರಷ್ಟು ಭಾಗ ಹೊಂದಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡ 94.29 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.