ADVERTISEMENT

ಕೋವಿಡ್: 24 ಗಂಟೆಗಳಲ್ಲಿ 505 ಪ್ರಕರಣ; ದೇಶದಲ್ಲಿ ರೋಗಿಗಳ ಸಂಖ್ಯೆ 3,577 

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 18:13 IST
Last Updated 5 ಏಪ್ರಿಲ್ 2020, 18:13 IST
ಕೋವಿಡ್
ಕೋವಿಡ್    

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿಕೊರೊನಾ ಸೋಂಕುತಗುಲಿರುವ 505 ಪ್ರಕರಣಗಳು ವರದಿಯಾಗಿವೆ.ರೋಗಿಗಳ ಸಂಖ್ಯೆ 3,577ಕ್ಕೇರಿದ್ದು, ಸಾವಿನ ಸಂಖ್ಯೆ 83 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೊರೊನಾ ರೋಗ ದೃಢಪಡಿಸಿರುವ ರೋಗಿಗಳ ಸಂಖ್ಯೆ 3,219 ಆಗಿದ್ದು, 274 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ವಲಸೆ ಹೋಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 24 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.

ಆದಾಗ್ಯೂ, ಪಿಟಿಆ ಸುದ್ದಿ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ 110 ಸಾವು ಸಂಭವಿಸಿದೆ.ರೋಗಿಗಳ ಸಂಖ್ಯೆ 3,959ಕ್ಕೇರಿದೆ. 306 ಮಂದಿ ಗುಣ ಮುಖರಾಗಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ 13 ಸಾವು
ಮಹಾರಾಷ್ಟ್ರದಲ್ಲಿ ಭಾನುವಾರ 13 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈನಲ್ಲಿ 8, ಪುಣೆಯಲ್ಲಿ 3 ಮತ್ತು ಕಲ್ಯಾಣ್, ದೊಂಬಿವಲಿ, ಔರಂಗಬಾದ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದ್ದು ಸಾವಿಗೀಡಾದವರ ಸಂಖ್ಯೆ 45ಕ್ಕೇರಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ.

ದೆಹಲಿಯಲ್ಲಿ 58 ಹೊಸ ಪ್ರಕರಣಗಳು
ದೆಹಲಿಯಲ್ಲಿ 58 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು 503 ಮಂದಿಗೆ ರೋಗ ಇರುವುದಾಗಿದೃಢಪಟ್ಟಿದೆ.ತಬ್ಲೀಗಿ ಜಮಾತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ 19 ಮಂದಿಗೆ ಸೋಂಕು ತಗುಲಿದ್ದು ರಾಜ್ಯಲಿರುವ ಒಟ್ಟು ರೋಗಿಗಳ ಸಂಖ್ಯೆ 320ಕ್ಕೇರಿದೆ.

ತಮಿಳುನಾಡಿನಲ್ಲಿ 86 ಹೊಸ ಪ್ರಕರಣ
ತಮಿಳುನಾಡಿನಲ್ಲಿ 86 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 571ಕ್ಕೇರಿದೆ.

ಉತ್ತರ ಪ್ರದೇಶದಲ್ಲಿ ಒಂದು ಸಾವು ಸಂಭವಿಸಿದೆ

ಮಧ್ಯಪ್ರದೇಶದಲ್ಲಿ ಒಂದು ಸಾವು
53ರ ಹರೆಯದ ಮಹಿಳೆಯೊಬ್ಬರು ಎಂಜಿಎಂ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು ಇಲ್ಲಿ ಸಾವಿನ ಸಂಖ್ಯೆ 9ಕ್ಕೇರಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಸೋಂಕು ಪ್ರಕರಣಲ್ಲಿ ಭಾರೀ ಏರಿಕೆಯಾಗಿದ್ದು 14 ಮಂದಿಗೆ ಸೋಂಕು ಇರುವುದಾಗಿ ದೃಢಪಟ್ಟಿದೆ.

ಹಿಮಾಚಲ ಪ್ರದೇಶದಲ್ಲಿ 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 6 ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರಾಗಿದ್ದಾರೆ.

ದೆಹಲಿ ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರ್ಯಾಣದ 4 ಮಂದಿಗೆ ಕೋವಿಡೋ ರೋಗ ದೃಢಪಟ್ಟಿದೆ. ಮೇವತ್‌ನಲ್ಲಿ ಕೊರೊನಾ ರೋಗಿಗಳ ಸಂಖ್ಯೆ 7ಕ್ಕೇರಿದೆ ಎಂದು ಮೇವತ್ ಸಿಎಂಒ ಹೇಳಿದ್ದಾರೆ.

ತೆಲಂಗಾಣದಲ್ಲಿ 62 ಹೊಸ ಪ್ರಕರಣ
ತೆಲಂಗಾಣದಲ್ಲಿ 62 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು 289 ರೋಗಿಗಳು ಇದ್ದಾರೆ.

ಪಂಬಾಬ್‌ನಲ್ಲಿ 2 ಸಾವು, ಸಾವಿನ ಸಂಖ್ಯೆ 7ಕ್ಕೇರಿದೆ.

ಉತ್ತರ ಪ್ರದೇಶದಲ್ಲಿ 44 ಹೊಸ ಪ್ರಕರಣಗಳು ದಾಖಲಾಗಿದ್ದು ಪ್ರಕರಣಗಳ ಸಂಖ್ಯೆ 278ಕ್ಕೇರಿದೆ.

ಕೇರಳದಲ್ಲಿ ಭಾನುವಾರ 8 ಹೊಸಪ್ರಕರಣಗಳು ವರದಿಯಾಗಿದ್ದು, 6 ಮಂದಿಗೆ ರೋಗ ಗುಣವಾಗಿದೆ .ಒಟ್ಟು 314 ರೋಗಿಗಳಿಗೆ ರೋಗ ದೃಢಪಟ್ಟಿದ್ದು, 6 ಮಂದಿಗೆ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದು ಬಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ದೆಹಲಿಯಲ್ಲಿ 445 ಪ್ರಕರಣಗಳು ವರದಿಯಾಗಿದ್ದು ಇಲ್ಲಿಯವರೆಗೆ 6 ಮಂದಿ ಸಾವಿಗೀಡಾಗಿದ್ದಾರೆ. 15 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.