ADVERTISEMENT

Covid-19 India Update: 2.57 ಲಕ್ಷ ಹೊಸ ಪ್ರಕರಣ, 4,194 ಸಾವು

ಪಿಟಿಐ
Published 22 ಮೇ 2021, 5:57 IST
Last Updated 22 ಮೇ 2021, 5:57 IST
ಪ್ರಾತಿನಿಧಿಕ ಚಿತ್ರ: ಐಸ್ಟಾಕ್
ಪ್ರಾತಿನಿಧಿಕ ಚಿತ್ರ: ಐಸ್ಟಾಕ್   

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 2.57 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸತತ ಆರನೇ ದಿನವೂ 3 ಲಕ್ಷಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಹೀಗಾಗಿ, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,62,89,290ಕ್ಕೆ ಏರಿದೆ.

ಒಂದೇ ದಿನ 4,194 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಈವರೆಗಿನ ಒಟ್ಟು ಸಾವಿನ ಸಂಖ್ಯೆ 2,95,525ಕ್ಕೆ ಏರಿದೆ,

ADVERTISEMENT

ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ 11.12ರಷ್ಟು ಕಡಿಮೆಯಾಗಿದ್ದು, 29,23,400ಕ್ಕೆ ಇಳಿದಿವೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 87.76ಕ್ಕೆ ಏರಿದೆ.

ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 2,30,70,365 ಕ್ಕೆ ಏರಿದರೆ, ಸಾವಿನ ಪ್ರಮಾಣ ಶೇಕಡಾ 1.12 ರಷ್ಟಿದೆ ಎಂದು ಡಾಟಾ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರಕಾರ, ಮೇ 21 ರವರೆಗೆ 32,64,84,155 ಮಾದರಿಗಳ ಕೋವಿಡ್ -19 ಪರೀ್ಕ್ಷೆ ನಡೆಸಲಾಗಿದೆ. ಶುಕ್ರವಾರ 20,66,285 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.