ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 43,509 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 640 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಈವರೆಗೆ ದೇಶದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 3,15,28,114ಕ್ಕೆ ಏರಿದೆ.
24 ಗಂಟೆಗಳಲ್ಲಿ 38,465 ಸೋಂಕಿತರು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ. 97.39ರಷ್ಟಿದ್ದು, ಸದ್ಯ, ದೇಶದಲ್ಲಿ 4,03,840 ಸಕ್ರಿಯ ಪ್ರಕರಣಗಳಿವೆ.
ಈವರೆಗೆ ದೇಶದಲ್ಲಿ 45.07 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.
ಕೋವಿಡ್‌ನಿಂದ ದೇಶದಾದ್ಯಂತ ಮೃತಪಟ್ಟವರ ಒಟ್ಟು ಸಂಖ್ಯೆ 4,22,662 ರಷ್ಟಾಗಿದೆ. ಮಹಾರಾಷ್ಟ್ರದಲ್ಲಿ 1,32,145, ಕರ್ನಾಟಕದಲ್ಲಿ 36,456, ತಮಿಳುನಾಡಿನಲ್ಲಿ 33,995, ದೆಹಲಿಯಲ್ಲಿ 25,049, ಉತ್ತರಪ್ರದೇಶದಲ್ಲಿ 22,755, ಪಶ್ಚಿಮ ಬಂಗಾಳದಲ್ಲಿ 18,109 ಮತ್ತು ಪಂಜಾಬ್‌ನಲ್ಲಿ 16,286 ಸಾವುಗಳು ಸಂಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.