ADVERTISEMENT

Covid-19 India Update: 1.52 ಲಕ್ಷ ಹೊಸ ಪ್ರಕರಣ, ಹೆಚ್ಚಿದ ಚೇತರಿಕೆ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 31 ಮೇ 2021, 4:43 IST
Last Updated 31 ಮೇ 2021, 4:43 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ನವದೆಹಲಿ: ದೇಶದಾದ್ಯಂತ ಸೋಮವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 1,52,734 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 3,128 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಹೊಸ ಪ್ರಕರಣಗಳ ಇಳಿಕೆ ಮುಂದುವರಿದಿದ್ದು, ಏಪ್ರಿಲ್‌ 11ರ ಬಳಿಕ ಅತಿ ಕಡಿಮೆ ಪ್ರಕರಣ ದಾಖಲಾಗಿದೆ.

ಚೇತರಿಕೆ ಪ್ರಮಾಣ ಶೇ 91 ದಾಟಿದೆ. ಸದ್ಯ ದೇಶದಲ್ಲಿ 20,26,092 ಸಕ್ರಿಯ ಪ್ರಕರಣಗಳಿವೆ.

ADVERTISEMENT

ದೇಶದಲ್ಲಿ ಈವರೆಗೆ 2,80,47,534 ಮಂದಿಗೆ ಸೋಂಕು ತಗುಲಿದ್ದು, 3,29,100 ಮಂದಿ ಅಸುನೀಗಿದ್ದಾರೆ. 2,56,92,342 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಈವರೆಗೆ 21,31,54,129 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

ಹೊಸ ಪ್ರಕರಣಗಳ ಇಳಿಕೆಯ ಹೊರತಾಗಿಯೂ ಹಲವು ರಾಜ್ಯಗಳು ಲಾಕ್‌ಡೌನ್‌ ವಿಸ್ತರಣೆ ಮಾಡಿವೆ. ಮಹಾರಾಷ್ಟ್ರದಲ್ಲಿ ಜೂನ್ 15ರ ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.