ADVERTISEMENT

ಹರಿಯಾಣ: ಕೋವಿಡ್–19‌ನಿಂದ ಬಳಲುತ್ತಿದ್ದ ಸಚಿವ ವಿಜ್‌ ರೋಹ್ಟಕ್‌ ಆಸ್ಪತ್ರೆಗೆ

ಪಿಟಿಐ
Published 13 ಡಿಸೆಂಬರ್ 2020, 9:54 IST
Last Updated 13 ಡಿಸೆಂಬರ್ 2020, 9:54 IST
ಸಚಿವ ಅನಿಲ್‌ ವಿಜ್‌
ಸಚಿವ ಅನಿಲ್‌ ವಿಜ್‌   

ಅಂಬಾಲಾ: ಕೋವಿಡ್‌–19 ದೃಢಪಟ್ಟಿದ್ದರಿಂದ ಅಂಬಾಲಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್‌ ಆಸ್ಪತ್ರೆಗೆ ಭಾನುವಾರ ಸ್ಥಳಾಂತರಿಸಲಾಗಿದೆ.

‘ಸಚಿವ ವಿಜ್‌ ಅಸ್ವಸ್ಥಗೊಂಡ ಕಾರಣ ಅವರನ್ನು ರೋಹ್ಟಕ್‌ ಆಸ್ಪತ್ರೆಗೆ ಶನಿವಾರ ರಾತ್ರಿ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಕುಲದೀಪ್‌ ಸಿಂಗ್‌ ತಿಳಿಸಿದರು.

ಭಾರತ್‌ ಬಯೊಟೆಕ್‌ ಸಂಸ್ಥೆಯು ಕೋವಿಡ್‌ ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು 67 ವರ್ಷದ ಅನಿಲ್‌ ಅವರ ಮೇಲೂ ಪ್ರಯೋಗಿಸಲಾಗಿತ್ತು. ಅದಾದ ನಂತರ ಡಿ.5ರಂದು ಅವರಿಗೆ ಕೋವಿಡ್‌–19 ದೃಢಪಟ್ಟಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.