ADVERTISEMENT

ಕೋವಿಡ್‌: ಮತ್ತೆ ಏರಿಕೆ ಕಳವಳ, 49,881 ಹೊಸ ಪ್ರಕರಣಗಳು ದೃಢ

ಹಬ್ಬದ ಜನಸಂದಣಿಯಿಂದ ಹರಡುವಿಕೆ ಅಪಾಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 20:02 IST
Last Updated 29 ಅಕ್ಟೋಬರ್ 2020, 20:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""

ನವದೆಹಲಿ: ಇಳಿಮುಖದತ್ತ ಸಾಗಿದ್ದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಎರಡು ದಿನಗಳಿಂದ ಮತ್ತೆ ಏರಿಕೆ
ಕಾಣತೊಡಗಿದೆ. ಕೇರಳ, ದೆಹಲಿ ಮತ್ತುಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹೊಸ ಪ್ರಕಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಆಗುತ್ತಿವೆ. ಕೇರಳ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆ ಆಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಗುರುವಾರ ಬೆಳಗ್ಗೆ 8 ಗಂಟೆಯವರೆಗಿನ 24 ತಾಸುಗಳಲ್ಲಿ 49,881ಹೊಸ ಪ್ರಕರಣಗಳು ದೃಢಪಟ್ಟಿವೆ. ಬುಧ
ವಾರ 43,893 ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ ಅತ್ಯಂತ ಕಡಿಮೆ ಅಂದರೆ 36,470 ಪ್ರಕರಣಗಳು ಮಾತ್ರ ದೃಢಪಟ್ಟಿದ್ದವು ಎಂದು ಕೇಂದ್ರಆರೋಗ್ಯ ಸಚಿವಾಲಯದ ಮಾಹಿತಿಹೇಳುತ್ತದೆ.ಅದೇ ದಿನ ಕೋವಿಡ್‌ನಿಂದಾದ ಮರಣ ಸಂಖ್ಯೆ ಕೂಡ ಹಲವು ವಾರಗಳ ಬಳಿಕ 500ರ ಒಳಗೆ ಕುಸಿದಿತ್ತು. ಗುರುವಾರದ ಮಾಹಿತಿ ಪ್ರಕಾರ, ಹಿಂದಿನ 24 ತಾಸುಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 517.

ಹೆಚ್ಚಳಕ್ಕೆ ಕಾರಣವೇನು?: ಹಬ್ಬಗಳಿಂದಾಗಿ ಜನರ ಒಟ್ಟು ಸೇರುವಿಕೆ, ಗಾಳಿಯ ಗುಣಮಟ್ಟ ಕುಸಿತ, ಉಸಿರಾಟದ ಸಮಸ್ಯೆಗಳಲ್ಲಿ ಹೆಚ್ಚಳ, ಕೆಲಸದ ಸ್ಥಳಗಳಲ್ಲಿ ಸೋಂಕು ಹರಡುವಿಕೆಯು ಪ್ರಕರಣಗಳ ಏರಿಕೆಗೆ ಮುಖ್ಯ ಕಾರಣ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಹಬ್ಬಗಳು ಸೋಂಕು ಹರಡುವಿಕೆಗೆ ಮುಖ್ಯ ಕಾರಣ ಆಗಿರುವುದು ಕಳವಳ ಸೃಷ್ಟಿಸಿದೆ. ಹಾಗಾಗಿ, ಈ ವಿಚಾರದಲ್ಲಿ ಜಾಗೃತಿ ಮೂಡಿಸುವಂತೆ, ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮುಂತಾದ ಎಚ್ಚರ ವಹಿಸಲು ಜನರಿಗೆ ತಿಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.