ADVERTISEMENT

ದೇಶದಲ್ಲಿ ಕೋವಿಡ್ 4ನೇ ಅಲೆಯ ಸುಳಿವು ಇಲ್ಲ: ತಜ್ಞರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 12:44 IST
Last Updated 5 ಜೂನ್ 2022, 12:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ನಾಲ್ಕನೇ ಅಲೆಗೆ ಕಾರಣವಾಗುವ ಸುಳಿವು ಕಂಡುಬರುತ್ತಿಲ್ಲ. ಹೀಗಾಗಿ ಕೋವಿಡ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಮುಂಬೈನ ತಜ್ಞ ಡಾ.ಈಶ್ವರ ಗಿಲಡಾ ಹೇಳಿದ್ದಾರೆ.

ಆದಾಗ್ಯೂ, ಲಸಿಕಾ ಕಾರ್ಯಕ್ರಮವನ್ನು ತೀವ್ರಗೊಳಿಸಬೇಕು. ಜೊತೆಗೆ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿರ್ಬಂಧ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಭಾನುವಾರ ಮಾತನಾಡಿದ ಡಾ. ಈಶ್ವರ ಗಿಲಡಾ, ‘ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ಅಷ್ಟೇ ಅಲ್ಲದೆ, ಕೇರಳದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದರಲ್ಲಿ ಅನುಮಾನವೇನಿಲ್ಲ. ದೇಶದಲ್ಲಿನ 3ನೇ ಅಲೆಗೆ ಈ ಎರಡೂ ರಾಜ್ಯಗಳು ಕಾರಣವಾಗಿದ್ದವು. ಆದರೆ, ಆಮ್ಲಜನಕ, ಬೆಡ್‌ಗಳ ಬೇಡಿಕೆ ಹೆಚ್ಚಾಗಿಲ್ಲ. ಜೊತೆಗೆ ಕೋವಿಡ್‌ಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಕಳೆದ ವಾರ ದೇಶದಲ್ಲಿ ಕೋವಿಡ್‌ಗೆ 106 ಮಂದಿ ಬಲಿಯಾಗಿದ್ದರು. ಕೋವಿಡ್ ಪ್ರಕರಣಗಳಲ್ಲಿ ಕಳೆದ ವಾರ 25,036 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇದು 2 ವಾರಗಳ ಹಿಂದೆ ದಾಖಲಾಗಿದ್ದ 16,672ಕ್ಕೆ ಹೋಲಿಸಿದರೆ, ಶೇ 50ರಷ್ಟು ಪ್ರಕರಣಗಳು ಏರಿಕೆ ಕಂಡುಬಂದಿತ್ತು. ಆದರೆ, ಸಾವಿನ ಸಂಖ್ಯೆಯಲ್ಲಿ ಶೇ 39ರಷ್ಟು ಇಳಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.