ADVERTISEMENT

Covid India Update| ದೇಶದಲ್ಲಿ 30,941 ಹೊಸ ಪ್ರಕರಣಗಳು ಪತ್ತೆ

ಪಿಟಿಐ
Published 31 ಆಗಸ್ಟ್ 2021, 5:56 IST
Last Updated 31 ಆಗಸ್ಟ್ 2021, 5:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಭಾರತದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 30,941 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,27,68,880ಕ್ಕೆ ಹೆಚ್ಚಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಹೇಳಿದೆ.

‘ಇದೇ ಅವಧಿಯಲ್ಲಿ 350 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಒಟ್ಟು ಸಂಖ್ಯೆಯು 4,38,560ಕ್ಕೆ ಹೆಚ್ಚಿದೆ. ಆದರೆ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆಯು 3,70,640ಕ್ಕೆ ಇಳಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 1.13 ರಷ್ಟು ಪಾಲನ್ನು ಹೊಂದಿದೆ. ರಾಷ್ಟ್ರೀಯ ಚೇತರಿಕೆ ದರವು ಶೇಕಡ 97.53 ರಷ್ಟಿದೆ’ ಎಂದು ಸಚಿವಾಲಯವು ತಿಳಿಸಿದೆ.

ಸೋಮವಾರ 13,94,573 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾ‌ಗಿದ್ದು, ಈವರೆಗೆ ದೇಶದಲ್ಲಿ ಒಟ್ಟು52,15,41,098 ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ದೈನಂದಿನ ಸೋಂಕು ದೃಢ ಪ್ರಮಾಣವು ಶೇಕಡ 2.22 ರಷ್ಟಿದೆ.

ADVERTISEMENT

ದೇಶದಲ್ಲಿ 3,19,59,680 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸಾವಿನ ದರವು ಶೇಕಡ 1.34 ರಷ್ಟಿದೆ. ಈವರೆಗೆ ಒಟ್ಟು 64.05 ಕೋಟಿ ಡೋಸ್‌ ಲಸಿಕೆಗಳನ್ನು ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.