ADVERTISEMENT

Covid-19 India Update: 24ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 32,007 ಮಂದಿ ಗುಣಮುಖ

ಏಜೆನ್ಸೀಸ್
Published 21 ಸೆಪ್ಟೆಂಬರ್ 2020, 15:48 IST
Last Updated 21 ಸೆಪ್ಟೆಂಬರ್ 2020, 15:48 IST
ಕೋವಿಡ್‌ ಪತ್ತೆ ಪರೀಕ್ಷೆಗೆ ಒಳಗಾದ ಯುವತಿ (ಪ್ರಾತಿನಿಧಿಕ ಚಿತ್ರ – ಪಿಟಿಐ)
ಕೋವಿಡ್‌ ಪತ್ತೆ ಪರೀಕ್ಷೆಗೆ ಒಳಗಾದ ಯುವತಿ (ಪ್ರಾತಿನಿಧಿಕ ಚಿತ್ರ – ಪಿಟಿಐ)   

ನವದೆಹಲಿ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ದೃಢಪಟ್ಟ 15,738 ಹೊಸ ಪ್ರಕರಣಗಳು ದಾಖಲಾಗಿದ್ದು, 32,007 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ 344 ಮಂದಿ ಮೃತಪಟ್ಟಿದ್ದಾರೆ.

ಒಟ್ಟು 12,24,380 ಪ್ರಕರಣಗಳ ಪೈಕಿ 9,16,348 ಮಂದಿ ಗುಣಮುಖರಾಗಿದ್ದು, 33,015 ಮಂದಿ ಸಾವಿಗೀಡಾಗಿದ್ದಾರೆ. 2,74,623 ಸಕ್ರಿಯ ಪ್ರಕರಣಗಳಿರುವುದಾಗಿ ಮಹಾರಾಷ್ಟ್ರ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ಅವಧಿಯಲ್ಲಿ ಮುಂಬೈನಲ್ಲಿ 1,837 ಪ್ರಕರಣಗಳು ದಾಖಲಾಗಿದ್ದು, 2,728 ಮಂದಿ ಗುಣಮುಖಾಗಿದ್ದಾರೆ ಹಾಗೂ 36 ಮಂದಿ ಸಾವಿಗೀಡಾಗಿದ್ದಾರೆ. 26,735 ಸಕ್ರಿಯ ಪ್ರಕರಣಗಳಿವೆ.

ADVERTISEMENT

ದೆಹಲಿಯಲ್ಲಿ 2,548 ಪ್ರಕರಣಗಳು, ಹರಿಯಾಣದಲ್ಲಿ 1,818 ಪ್ರಕರಣಗಳು, ಮಧ್ಯ ಪ್ರದೇಶದಲ್ಲಿ 2,523 ಹಾಗೂ ಪಂಜಾಬ್‌ನಲ್ಲಿ 2,247 ಪ್ರಕರಣಗಳು ಹೊಸ ಪ್ರಕರಣಗಳು ದಾಖಲಾಗಿವೆ.

ಸೋಮವಾರ ಬೆಳಗ್ಗಿನ ವರೆಗೂ ದೇಶದಲ್ಲಿ ಒಟ್ಟು 86,961 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 54.87 ಲಕ್ಷ ಮೀರಿದೆ.

ಇದೇ ವೇಳೆ, 1,130 ಸಾವುಗಳು ದೇಶದಾದ್ಯಂತ ಸಂಭವಿಸಿವೆ. ಇದರೊಂದಿಗೆ ದೇಶದಲ್ಲಿ ಮಹಾಮಾರಿಗೆ ಪ್ರಾಣ ತೆತ್ತವರ ಒಟ್ಟು ಸಂಖ್ಯೆ 87,882ಕ್ಕೆ ಏರಿಕೆಯಾಗಿದೆ.

ಸದ್ಯ ದೇಶದಲ್ಲಿ 10,03,299 ಸಕ್ರೀಯ ಕೋವಿಡ್‌ ಪ್ರಕರಣಗಳಿದ್ದು, 43,96,399 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದಾರೆ. ಈ ಅಂಕಿ ಅಂಶಗಳನ್ನು ಕೇಂದ್ರ ಆರೋಗ್ಯ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.