ADVERTISEMENT

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೆಹಲಿಯ ಲಜಪತ್‌ ನಗರ ಮಾರುಕಟ್ಟೆ ಬಂದ್‌

ಪಿಟಿಐ
Published 5 ಜುಲೈ 2021, 11:42 IST
Last Updated 5 ಜುಲೈ 2021, 11:42 IST
ಲಜಪತ್‌ ನಗರ ಮಾರುಕಟ್ಟೆ
ಲಜಪತ್‌ ನಗರ ಮಾರುಕಟ್ಟೆ   

ನವದೆಹಲಿ: ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಕ್ಷಿಣ ದೆಹಲಿಯ ಲಜಪತ್ ನಗರ ಮಾರುಕಟ್ಟೆಯನ್ನು ಮುಂದಿನ ಆದೇಶದವರೆಗೆ ಮತ್ತು ರುಯಿ ಮಂಡಿಯನ್ನು ಜುಲೈ 6ರ ತನಕ ಮುಚ್ಚುವಂತೆ ದೆಹಲಿ ಸರ್ಕಾರವು ಸೂಚಿಸಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು(ಡಿಡಿಎಂಎ) ಭಾನುವಾರ ಈ ಆದೇಶವನ್ನು ಹೊರಡಿಸಿದೆ.

ಮಾರುಕಟ್ಟೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುವ ಕಾರಣ ಮುಂದಿನ ಆದೇಶ ಬರುವವರಿಗೆ ಲಜಪತ್‌ ನಗರ ಮಾರುಕಟ್ಟೆಯನ್ನು ಮುಚ್ಚುವಂತೆ ಸೂಚಿಸಲಾಗಿದೆ’ ಎಂದು ಪ್ರಾಧಿಕಾರ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.