ADVERTISEMENT

ಕೋವಿಡ್‌ ಪ್ರಕರಣ ಹೆಚ್ಚಳ: ಅಹಮದಾಬಾದ್‌ನಲ್ಲಿ ಮೃಗಾಲಯ, ಉದ್ಯಾನ ಬಂದ್‌

ಪಿಟಿಐ
Published 17 ಮಾರ್ಚ್ 2021, 9:45 IST
Last Updated 17 ಮಾರ್ಚ್ 2021, 9:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಮೃಗಾಲಯ, ಸರೋವರ ಮತ್ತು ಸಾರ್ವಜನಿಕ ಉದ್ಯಾನಗಳನ್ನು ಮುಚ್ಚುವುದಾಗಿ ಅಹಮದಾಬಾದ್‌ ಮಹಾನಗರ ಪಾಲಿಕೆ (ಎಎಂಸಿ) ಬುಧವಾರ ತಿಳಿಸಿದೆ.

ಅಹಮದಾಬಾದ್‌ನಲ್ಲಿ ಮಂಗಳವಾರ 241 ಹೊಸ ‍ಕೋವಿಡ್‌ ‍ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ನಗರದ ಒಟ್ಟು ಪ್ರಕರಣಗಳ ಸಂಖ್ಯೆ 60,992ಕ್ಕೆ ಏರಿಕೆಯಾಗಿದೆ.

‘ಕೋವಿಡ್‌ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 18 ರಿಂದ ಮುಂದಿನ ಆದೇಶದ ವರೆಗೆ ಉದ್ಯಾನ, ಸರೋವರ ಮತ್ತು ಮೃಗಾಲಯಗಳನ್ನು ಮುಚ್ಚಲಾಗುವುದು’ ಎಂದು ಎಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಗುಜರಾತ್‌ ಸರ್ಕಾರವು ಮಂಗಳವಾರ ಸೂರತ್‌, ವಡೋದರ, ರಾಜ್‌ಕೋಟ್‌ ಮತ್ತು ಅಹಮದಾಬಾದ್‌ನಲ್ಲಿ ರಾತ್ರಿ ಕರ್ಫ್ಯೂ ಸಮಯವನ್ನು ಎರಡು ಗಂಟೆಗಳ ಕಾಲ ಹೆಚ್ಚಿಸಿದೆ.

ಮಂಗಳವಾರದರೆಗೆ ನಗರದಲ್ಲಿ ಒಟ್ಟು 60 ಸಣ್ಣ ಕಂಟೈನ್‌ಮೆಂಟ್‌ ವಲಯಗಳಿದ್ದವು ಎಂದು ಪಾಲಿಕೆ ಹೇಳಿದೆ.

ಅಹಮದಾಬಾದ್‌ನಲ್ಲಿ ಈವರೆಗೆ ಕೋವಿಡ್‌ನಿಂದಾಗಿ 2,269 ಮಂದಿ ಮೃತಪಟ್ಟಿದ್ದಾರೆ. 58,043 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.