ADVERTISEMENT

ದೀರ್ಘಾವಧಿಯಲ್ಲಿ ಕೋವಿಡ್‌ ಸೋಂಕು ಪ್ರಸರಣ –ಡಬ್ಲ್ಯೂಎಚ್‌ಒ

ಪಿಟಿಐ
Published 28 ಸೆಪ್ಟೆಂಬರ್ 2021, 10:50 IST
Last Updated 28 ಸೆಪ್ಟೆಂಬರ್ 2021, 10:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಕೋವಿಡ್ ಸೋಂಕು ದೀರ್ಘಾವಧಿಯಲ್ಲಿ ಪ್ರಸರಣವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ಹಿರಿಯ ಅಧಿಕಾರಿ ಪೂನಂ ಕ್ಷೇತ್ರಪಾಲ್‌ ಸಿಂಗ್ ಹೇಳಿದ್ದಾರೆ.

ಇದು, ದೀರ್ಘಾವಧಿಯಲ್ಲಿ ಸಾಂಕ್ರಾಮಿಕವಾಗಿ ಉಳಿಯಲಿದೆಯೇ ಎಂಬುದನ್ನು ಲಸಿಕೆ ಮೂಲಕ ಜನರಲ್ಲಿ ಇರುವ ಪ್ರತಿರೋಧ ಶಕ್ತಿ, ಈ ಹಿಂದಿನ ಸೋಂಕು ಪರಿಣಾಮವನ್ನು ಆಧರಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿಯಾಗಿರುವ ಅವರು, ಸೋಂಕಿನ ಮೇಲೆ ಸಂಪೂರ್ಣ ನಿಯಂತ್ರಣವಿದೆ ಎಂಬ ಪರಿಸ್ಥಿತಿ ಈಗಿನ ಅಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ಸೋಂಕಿನ ಜೊತೆಗೆ ಬದುಕಬಹುದು ಎಂದು ಜನರು ಅರ್ಥಮಾಡಿಕೊಂಡ ಅವಧಿಯಲ್ಲಿ ಸೋಂಕು ಪರಿಣಾಮ ಅಂತ್ಯವಾಗಲಿದೆ. ಈ ಹಿಂದೆ ಹೆಚ್ಚಿನ ಜನರಿಗೆ ಸೋಂಕು ಆಗಿರುವುದು ಅಥವಾ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆದಿರುವ ಜನಸಂಖ್ಯೆಯನ್ನು ಸೋಂಕು ಪರಿಣಾಮವು ಆಧರಿಸಿದೆ ಎಂದು ಹೇಳಿದರು.

ದೇಶೀಯ ಕೋವ್ಯಾಕ್ಸಿನ್ ಲಸಿಕೆಯ ತುರ್ತುಬಳಕೆಗೆ ಅನುಮೋದನೆ ಕುರಿತಂತೆ ಅವರು, ಭಾರತ್‌ ಬಯೊಟೆಕ್‌ನ ಈ ಲಸಿಕೆಯನ್ನು ವಿಶ್ವಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿ ಸಮಿತಿಯು ಪರಿಶೀಲಿಸಲಿದೆ. ಆ ಬಳಿಕವೇ ಫಲಿತಾಂಶ ತಿಳಿಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.