ADVERTISEMENT

ದೇಶೀಯ ಕೋವಿಡ್‌ ಲಸಿಕೆ 'ಕೋವಾಕ್ಸಿನ್' ಒಂದು ವರ್ಷದ ವರೆಗೆ ಪರಿಣಾಮಕಾರಿ: ಸಂಶೋಧಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2020, 3:43 IST
Last Updated 24 ಡಿಸೆಂಬರ್ 2020, 3:43 IST
ಕೋವಾಕ್ಸಿನ್ ಲಸಿಕೆ
ಕೋವಾಕ್ಸಿನ್ ಲಸಿಕೆ   

ನವದೆಹಲಿ: ಕೋವಾಕ್ಸಿನ್ ಉತ್ಪಾದಿಸುವ ಪ್ರತಿಕಾಯಗಳು ಆರು ತಿಂಗಳಿನಿಂದ ಒಂದು ವರ್ಷದ ವರೆಗೆ ಪರಿಣಾಮಕಾರಿಯಾಗಬಹುದು ಎಂದು ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಎರಡನೇ ಹಂತದ ಮಧ್ಯಂತರ ಸಂಶೋಧನಾ ವರದಿಯು ತಿಳಿಸಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಬಿಬಿವಿ152 ಅಥವಾ ಕೋವಾಕ್ಸಿನ್ಲಸಿಕೆಯು ಕ್ಲಿನಿಕಲ್‌ ಪ್ರಯೋಗ ಹಂತದಲ್ಲಿದೆ. ವಿವಿಧ ಪ್ರಾಯ ಪರಿಧಿಯಲ್ಲಿ ಅಂದರೆ 12 ವರ್ಷ, ಅದಕ್ಕಿಂತ ಮೇಲ್ಬಟ್ಟವರಿಂದ 65 ವರ್ಷ ವರೆಗಿನ ಪ್ರಾಯ ಪರಿಧಿಯಲ್ಲಿ ತಾಳಲಾಗುವ ಸುರಕ್ಷಾ ಫಲಿತಾಂಶವನ್ನು ಪ್ರದರ್ಶಿಸಿದೆ.

ಫೈಜರ್‌ನಂತಹ ಇತರೆ ಕೋವಿಡ್-19 ಲಸಿಕೆಗಳನ್ನು 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯ ಪರಿಧಿ ಹಾಗೂ ಅಸ್ಟ್ರಾಜೆನೆಕಾ ಲಸಿಕೆಯನ್ನು 18 ವರ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ADVERTISEMENT

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಲಾಜಿ ಸಹಯೋಗದಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಕೋವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಒಂದನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಜುಲೈನಲ್ಲಿ ನಡೆಸಲಾಗಿತ್ತು. ಪ್ರಸ್ತುತ ಲಸಿಕೆಯು ಮೂರನೇ ಹಂತದ ಪ್ರಯೋಗದಲ್ಲಿದ್ದು, 26,000 ಸ್ವಯಂಸೇವಕರನ್ನು ಪ್ರಯೋಗಕ್ಕೆ ಒಳಪಡಿಸಲು ಯೋಜಿಸಲಾಗಿದೆ.

ಒಂದನೇ ಹಂತದ ಪ್ರಯೋಗದಲ್ಲಿ ಕೋವಾಕ್ಸಿನ್ ಉನ್ನತ ಮಟ್ಟದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸಿತು. ಎರಡನೇ ವ್ಯಾಕ್ಸಿನೇಷನ್‌ನ ಮೂರು ತಿಂಗಳ ನಂತರವೂ (104ನೇ ದಿನ) ಇದರ ಪ್ರಭಾವವಿತ್ತು. ಈ ಫಲಿತಾಂಶಗಳ ಆಧಾರದ ಮೇಲೆ ಕೋವಾಕ್ಸಿನ್ ಆರರಿಂದ 12 ತಿಂಗಳ ವರೆಗೆ ಪ್ರತಿಕಾಯವನ್ನು ಉತ್ಪಾದಿಸಬಲ್ಲದು ಎಂದು ನಾವು ಅಂದಾಜಿಸಬಹುದಾಗಿದೆ ಎಂದು ಭಾರತ್ ಬಯೋಟೆಕ್, ಐಸಿಎಂಆರ್, ಎನ್‌ಐವಿ, ಏಮ್ಸ್ ಮತ್ತು ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್, ಹೈದರಾಬಾದ್, ಜೀವನ್ ರೇಖಾ ಹಾಸ್ಪಿಟಲ್, ಬೆಳಗಾವಿ ಮತ್ತು ಇನ್ನಿತರ ಸಂಶೋಧಕರ ತಂಡಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.