ಹೈದರಾಬಾದ್: ನಗರದ ಮಲಕಪೇಟದಲ್ಲಿ ತೆಲಂಗಾಣದ ಸಿಪಿಐ ಮುಖಂಡರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಮಂಗಳವಾರ ಬೆಳಿಗ್ಗೆ ಹತ್ಯೆ ಮಾಡಿದ್ದಾರೆ.
ಸಿಪಿಐನ ರಾಜ್ಯ ಮಂಡಳಿ ಸದಸ್ಯ ಕೆ. ಚಂದು ನಾಯ್ಕ್ (47) ಮೃತ ವ್ಯಕ್ತಿ.
ಮುಂಜಾವಿನ ವಾಯುವಿಹಾರ ನಡೆಸುತ್ತಿದ್ದ ಚಂದು ನಾಯ್ಕ್ ಮೇಲೆ ಕಾರಿನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.