ADVERTISEMENT

ಗಾಜಿಪುರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಪಿಎಂ ನಾಯಕ ರಾಗೇಶ್‌ಗೆ ಕೋವಿಡ್‌ ದೃಢ

ಏಜೆನ್ಸೀಸ್
Published 31 ಜನವರಿ 2021, 16:15 IST
Last Updated 31 ಜನವರಿ 2021, 16:15 IST
ಸಿಪಿಎಂ ನಾಯಕ ಕೆ.ಕೆ. ರಾಗೇಶ್- ರಾಜ್ಯಸಭಾ ಟಿವಿ ಚಿತ್ರ
ಸಿಪಿಎಂ ನಾಯಕ ಕೆ.ಕೆ. ರಾಗೇಶ್- ರಾಜ್ಯಸಭಾ ಟಿವಿ ಚಿತ್ರ   

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಗಾಜಿಪುರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ (ಎಂ) ಹಿರಿಯ ನಾಯಕ ಕೆ.ಕೆ. ರಾಗೇಶ್ ಅವರಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಈ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, 'ನನಗೆ ಕೋವಿಡ್ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದೇನೆ' ಎಂದು ತಿಳಿಸಿದ್ದಾರೆ.

'ನಾನು ಮೊದಲಿನಿಂದಲೂ ನಿಯಮಿತವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡುತ್ತಲೇ ಬಂದಿದ್ದೇನೆ. ಆಗ ನನಗೆ ಕೋವಿಡ್‌ ಇರುವುದು ದೃಢಪಟ್ಟಿರಲಿಲ್ಲ. ಜನವರಿ 27ರಂದು ಸಂಸತ್‌ ಅಧಿವೇಶನಕ್ಕೂ ಮುನ್ನ ನಡೆದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿತ್ತು. ಜನವರಿ 29ರಂದು ನಡೆದ ಪ್ರತಿಪಕ್ಷಗಳ ಪ್ರತಿಭಟನೆಗೂ ಮುಂಚೆಯೂ ನನಗೆ ಕೊರೊನಾ ಸೋಂಕಿರುವುದು ದೃಢಪಟ್ಟಿರಲಿಲ್ಲ' ಎಂದು ರಾಗೇಶ್‌ ಮಾಹಿತಿ ನೀಡಿದ್ದಾರೆ.

ADVERTISEMENT

ರಾಗೇಶ್‌ ಅವರಿಗೆ ಕೋವಿಡ್‌ ಇದೆ ಎಂಬುದು ಶನಿವಾರ ತಿಳಿದುಬಂದಿದೆ. ಆ ನಂತರ ಅವರಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದೆ.

ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ರಾಗೇಶ್ ಮುಂಚೂಣಿಯಲ್ಲಿದ್ದಾರೆ.

ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಜಾಗರೂಕರಾಗಿರಿ ಮತ್ತು ಅಗತ್ಯವಿದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ರಾಗೇಶ್‌ ಮನವಿ ಮಾಡಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.