ADVERTISEMENT

ಅಂಬೇಡ್ಕರ್‌ ಬರಹಗಳ ಬಗ್ಗೆ ಅರಿವು ಮೂಡಿಸಿ: ಮಹಾ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌

ಪಿಟಿಐ
Published 21 ಜುಲೈ 2022, 9:35 IST
Last Updated 21 ಜುಲೈ 2022, 9:35 IST
ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ
ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ   

ಮುಂಬೈ: ಮಹಾರಾಷ್ಟ್ರ ಸರ್ಕಾರದ ಕಿವಿಹಿಂಡಿರುವ ಬಾಂಬೆ ಹೈಕೋರ್ಟ್‌, ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಮತ್ತು ಇತರ ಸಮಾಜ ಸುಧಾರಕರ ಬರಹಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದೆ.

ಹಲವಾರು ಸಾಮಾಜಿಕ ಸುಧಾರಕರ ಕೈಬರಹವುಳ್ಳ ಉತ್ತಮ ಪುಸ್ತಕಗಳನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಹೆಚ್ಚಿನ ಮಂದಿಗೆ ಈ ಬಗ್ಗೆ ತಿಳಿಯದೇ ಇರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿಗಳಾದ ಪ್ರಸನ್ನ ವರಲೆ ಮತ್ತು ಕಿಶೋರ್‌ ಸಂತ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿದೆ.

ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದ ವರದಿಗಳನ್ನು ಆಧರಿಸಿ 2021 ಡಿಸೆಂಬರ್‌ನಲ್ಲಿ ಸ್ವಯಂ ಪ್ರೇರಿತ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಕೈಗೆತ್ತಿಕೊಂಡಿತ್ತು. ಮಹಾರಾಷ್ಟ್ರ ಸರ್ಕಾರವು ಅಂಬೇಡ್ಕರ್‌ ಸಾಹಿತ್ಯ ಪ್ರಕಟಣೆ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂಬ ವರದಿಗಳು ಬಂದಿದ್ದವು.

ADVERTISEMENT

'ಹಲವಾರು ಸಮಾಜ ಸುಧಾರಕರ ಬರಹಗಳನ್ನು ಪುಸ್ತಕಗಳ ರೂಪದಲ್ಲಿ ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಎಷ್ಟು ಮಂದಿಗೆ ಈ ಬಗ್ಗೆ ಗೊತ್ತಿದೆ? ಈ ಕಂತುಗಳು ಬಿಡುಗಡೆಗೊಂಡು ದಶಕಗಳೇ ಕಳೆದಿವೆ. ಅದರಲ್ಲೂ ಕೆಲವು ಕಂತುಗಳು ಅದ್ಭುತವಾಗಿವೆ' ಎಂದು ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರ ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.