ADVERTISEMENT

ಐಐಟಿ–ಬಾಂಬೆ ಕ್ಯಾಂಪಸ್‌ನಲ್ಲಿ ಮೊಸಳೆ ಪತ್ತೆ

ಪಿಟಿಐ
Published 24 ಮಾರ್ಚ್ 2025, 14:47 IST
Last Updated 24 ಮಾರ್ಚ್ 2025, 14:47 IST
   

ಮುಂಬೈ: ಐಐಟಿ–ಬಾಂಬೆ ಕ್ಯಾಂಪಸ್‌ನ ಪವೈ ಕೆರೆ ಬಳಿ ಬೃಹತ್‌ ಗಾತ್ರದ ಮೊಸಳೆಯೊಂದು ಓಡಾಡುತ್ತಿರುವ ವಿಡಿಯೊವೊಂದು ಸ್ಥಳೀಯರಲ್ಲಿ ಹೆಚ್ಚು ಆತಂಕ ಸೃಷ್ಟಿಸಿದೆ.

ಭಾನುವಾರ ರಾತ್ರಿ ಮೊಸಳೆಯು ಕೆರೆಯಿಂದ ಹೊರಬಂದು ಹತ್ತಿರದ ರಸ್ತೆಯೊಂದರ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡಿದೆ. ಕೆರೆಯಲ್ಲಿ ಮೊಸಳೆಗಳು ಇರುವ ಕಾರಣ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತವಾಗಿರಬೇಕು ಎಂದು ಪ್ರಾಣಿ ರಕ್ಷಕರೊಬ್ಬರು ತಿಳಿಸಿದ್ದಾರೆ. 

‘ಪತ್ತೆಯಾದ ಮೊಸಳೆಯು ಹೆಣ್ಣಾಗಿದ್ದು, ಮೊಟ್ಟೆಯಿಡಲು ಜಾಗವನ್ನು ಹುಡುಕುತ್ತಿರಬಹುದು. ಮೊಸಳೆಯು ಕೆರೆಗೆ ಹಿಂದಿರುಗಿರುವುದನ್ನು ಸ್ಥಳೀಯರು ಮತ್ತು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ’ ಎಂದು ರೆಸ್ಕಿಂಕ್‌ ಅಸೋಸಿಯೇಷನ್‌ ಫಾರ್‌ ವೈಲ್ಡ್‌ಲೈಫ್‌ ವೆಲ್‌ಫೇರ್‌ (ಆರ್‌ಎಡಬ್ಲ್ಯೂಡಬ್ಲ್ಯೂ)ನ ಸ್ಥಾಪಕ ಪವನ್‌ ಶರ್ಮಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.