ADVERTISEMENT

ದುರ್ಬಲಗೊಂಡ ಹಮೂನ್ ಚಂಡಮಾರುತ: ಹವಾಮಾನ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2023, 2:48 IST
Last Updated 26 ಅಕ್ಟೋಬರ್ 2023, 2:48 IST
<div class="paragraphs"><p>(ಚಿತ್ರ ಕೃಪೆ:&nbsp;@Indiametdept)&nbsp;</p></div>

(ಚಿತ್ರ ಕೃಪೆ: @Indiametdept) 

   

ನವದೆಹಲಿ: ಹಮೂನ್ ಚಂಡಮಾರುತದ ತೀವ್ರತೆ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಹಮೂನ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಗಾಳಿಯ ವೇಗ ಗಂಟೆಗೆ 130ರಿಂದ 145 ಕಿ.ಮೀ ವೇಗದಲ್ಲಿತ್ತು. ಈಗ ಗಾಳಿಯ ವೇಗ ಗಂಟೆಗೆ 70 ಕಿ.ಮೀ.ಗೆ ಇಳಿಕೆ ಕಂಡಿದೆ. ಕರಾವಳಿ ಪ್ರದೇಶವನ್ನು ಅಪ್ಪಳಿಸುವ ವೇಳೆಗೆ ಚಂಡಮಾರುತದ ತೀವ್ರತೆ ದುರ್ಬಲಗೊಂಡಿದೆ ಎಂದು ಐಎಂಡಿ ತಿಳಿಸಿದೆ.

ADVERTISEMENT

ಚಂಡಮಾರುತದಿಂದಾಗಿ ಭಾರತದ ಕರಾವಳಿ ಪ್ರದೇಶದಲ್ಲಿ ಹಾನಿ ಉಂಟಾಗಿಲ್ಲ. ತ್ರಿಪುರಾ, ಮಿಜೋರಾಂದಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.

ಮುಂದಿನ 12 ತಾಸುಗಳಲ್ಲಿ ಚಂಡಮಾರುತ ಮತ್ತಷ್ಟು ದುರ್ಬಲಗೊಂಡು ಉತ್ತರ-ಈಶಾನ್ಯದತ್ತ ಚಲಿಸಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.