ADVERTISEMENT

₹76,390 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಅನುಮೋದನೆ

ಪಿಟಿಐ
Published 7 ಜೂನ್ 2022, 15:22 IST
Last Updated 7 ಜೂನ್ 2022, 15:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶೀಯ ಕೈಗಾರಿಕೆಗಳಿಂದ ₹76,390 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಕೇಂದ್ರ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಸ್ಥರಾಗಿರುವ ಭದ್ರತಾ ಸ್ವಾಧೀನ ಮಂಡಳಿ(ಡಿಎಸಿ), ಮುಂದಿನ ಪೀಳಿಗೆಯ ಅತ್ಯಾಧುನಿಕ ಕಣ್ಗಾವಲು ನೌಕಾ ವ್ಯವಸ್ಥೆ (ಎನ್‌ಜಿಸಿ), ಸುಕೊಯ್-30 ಎಂಕೆಐ ಏರೊ ಎಂಜಿನ್ಸ್, ರಾಡಾರ್‌ಗಳು ಸೇರಿದಂತೆ ಇನ್ನಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಕರಾವಳಿ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಲಿರುವ ಎನ್‌ಜಿಸಿ ಖರೀದಿಗೆ ₹36,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ಭದ್ರತೆಗೆ ತನ್ನದೇ ಕೊಡುಗೆ ನೀಡಲಿದೆ ರಕ್ಷಣಾ ಸಚಿವಾಲಯ ತಿಳಿಸಿದೆ.

ADVERTISEMENT

ಡಿಜಿಟಲ್ ಕರಾವಳಿ ಯೋಜನೆಗೆ ಅಸ್ತು:

ಡಿಜಿಟಲ್ ಕರಾವಳಿ ಗಾರ್ಡ್ ಯೋಜನೆಗೆ ಭದ್ರತಾ ಸ್ವಾಧೀನ ಮಂಡಳಿ(ಡಿಎಸಿ) ಅನುಮೋದನೆ ನೀಡಿದೆ.ಈ ಯೋಜನೆಯಡಿ ದೇಶದಾದ್ಯಂತ ಕರಾವಳಿ ರಕ್ಷಣಾ ಪಡೆಯಲ್ಲಿನ ಭೂಮಿಯ ಮೇಲ್ಮೈ, ವೈಮಾನಿಕ ಕಾರ್ಯಾಚರಣೆ, ಸರಕುಗಳು, ಮಾನವ ಸಂಪನ್ಮೂಲಗಳ ಪ್ರಕ್ರಿಯೆಗಳನ್ನು ಡಿಜಟಲೀಕರಣಗೊಳಿಸಲಾಗುತ್ತದೆ ಎಂದು ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ದೇಶೀಯ ರಕ್ಷಣಾ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. 2020ರ ಮೇ ತಿಂಗಳಲ್ಲಿ ರಕ್ಷಣಾ ವಲಯದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.