ADVERTISEMENT

ದಲಿತ ಯುವತಿ ಮೇಲೆ ಅತ್ಯಾಚಾರ ಉಸಿರುಗಟ್ಟಿಸಿ ಕೊಲೆ

ಪಿಟಿಐ
Published 16 ಅಕ್ಟೋಬರ್ 2020, 8:14 IST
Last Updated 16 ಅಕ್ಟೋಬರ್ 2020, 8:14 IST
1
1   

ಬಾರಾಬಂಕಿ (ಉತ್ತರಪ್ರದೇಶ): ಇಲ್ಲಿನ ಸಾತ್ರಿಖ್‌ ಠಾಣೆ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 18 ವರ್ಷದ ದಲಿತ ಯುವತಿಯ ಶವಪತ್ತೆಯಾಗಿದೆ. ಅತ್ಯಾಚಾರ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ವರದಿ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್.ಗೌತಮ್ ಅವರು, ಕೃತ್ಯದ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ. ಮೃತಳ ತಂದೆ ದೂರು ನೀಡಿದ್ದು, ಜಮೀನಿಗೆ ಹೋಗಿದ್ದ ಮಹಿಳೆ ಮರಳಿ ಬರಲಿಲ್ಲ. ಬಳಿಕ ಅವಳ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮಕ್ಕೆ ಪೊಲೀಸರ ತಂಡ ತೆರಳಿ, ಸ್ಥಳ ಪರಿಶೀಲನೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT