ADVERTISEMENT

ಮಧ್ಯಪ್ರದೇಶ: ಮಳೆ, ಪ್ರವಾಹಕ್ಕೆ 24 ಸಾವು

ಪಿಟಿಐ
Published 7 ಆಗಸ್ಟ್ 2021, 11:04 IST
Last Updated 7 ಆಗಸ್ಟ್ 2021, 11:04 IST
ಮಧ್ಯಪ್ರದೇಶದಲ್ಲಿ ಭಾರಿ ಮಳೆ, ಪ್ರವಾಸ ಸ್ಥಿತಿ ಕಂಡುಬಂದಿದ್ದ ಶಿವಪುರಿ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವುದು (ಸಂಗ್ರಹ ಚಿತ್ರ).
ಮಧ್ಯಪ್ರದೇಶದಲ್ಲಿ ಭಾರಿ ಮಳೆ, ಪ್ರವಾಸ ಸ್ಥಿತಿ ಕಂಡುಬಂದಿದ್ದ ಶಿವಪುರಿ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವುದು (ಸಂಗ್ರಹ ಚಿತ್ರ).   

ಭೋಪಾಲ್‌ (ಪಿಟಿಐ): ಮಧ್ಯಪ್ರದೇಶದ ಚಂಬಲ್‌ ಮತ್ತು ಗ್ವಾಲಿಯರ್ ವಲಯದಲ್ಲಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ.

ಪರಿಸ್ಥಿತಿ ಸುಧಾರಿಸುತ್ತಿದೆ. ಸದ್ಯ ಆತಂಕದ ಸ್ಥಿತಿ ಇಲ್ಲ. ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಡೆದಿದೆ. ಆಗಸ್ಟ್‌ 1 ರಿಂದ 7ರ ನಡುವೆ ಮಳೆ, ಪ್ರವಾಹ ಎದುರಾಗಿತ್ತು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಜ್ಞಾನೇಶ್ವರ್ ಪಾಟೀಲ್‌ ತಿಳಿಸಿದ್ದಾರೆ.

ಗ್ವಾಲಿಯರ್, ಶಿವಪುರಿ, ಶಿಯೊಪುರ್, ದಾಟಿಯಾ, ಅಶೋಕ್‌ ನಗರ, ಗುಣ, ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಮಳೆ, ಪ್ರವಾಹದ ಪರಿಣಾಮ ತೀವ್ರವಾಗಿತ್ತು. 1,250 ಗ್ರಾಮಗಳ ಇದರ ಪರಿಣಾಮಕ್ಕೆ ಗುರಿಯಾಗಿದ್ದವು ಎಂದು ತಿಳಿಸಿದರು.

ADVERTISEMENT

ಈ ಮಧ್ಯೆ ಮುಖ್ಯಮಂ‌ತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರು, ಪ್ರವಾಹ ಪೀಡಿತ ಪ್ರದೇಶಗಳಿಂದ 8,832 ಜನರನ್ನು ರಕ್ಷಿಸಲಾಗಿದ್ದು, 29,280 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.