ADVERTISEMENT

5 ರಿಂದ 15 ವರ್ಷದವರಿಗೆ ಕೋವಿಡ್‌ ಲಸಿಕೆ: ತಜ್ಞರ ಶಿಫಾರಸಿನಂತೆ ಕ್ರಮ– ಮಾಂಡವಿಯಾ

ಶೇ 67ರಷ್ಟು ಮಕ್ಕಳಲ್ಲಿ ಪ್ರತಿಕಾಯ ಸೃಷ್ಟಿ

ಪಿಟಿಐ
Published 12 ಫೆಬ್ರುವರಿ 2022, 11:21 IST
Last Updated 12 ಫೆಬ್ರುವರಿ 2022, 11:21 IST
ಮನ್ಸುಖ್‌ ಮಾಂಡವಿಯಾ
ಮನ್ಸುಖ್‌ ಮಾಂಡವಿಯಾ   

ಗಾಂಧಿನಗರ: 5–15 ವರ್ಷ ವಯೋಮಾನದವರಿಗೆ ಕೋವಿಡ್‌ ಲಸಿಕೆ ನೀಡುವ ಕುರಿತು ತಜ್ಞರು ಈ ವರೆಗೆ ಯಾವುದೇ ಶಿಫಾರಸು ಮಾಡಿಲ್ಲ. ಅವರಿಂದ ಶಿಫಾರಸು ಸ್ವೀಕರಿಸಿದ ಕೂಡಲೇ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಶನಿವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ವಿರುದ್ದದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡುವಂತೆ ತಜ್ಞರು ಮಾಡಿದ್ದ ಶಿಫಾರಸನ್ನು ಒಂದು ವಾರದೊಳಗೆ ಅನುಷ್ಠಾನಗೊಳಿಸಲಾಗಿತ್ತು. ಅದೇ ರೀತಿ, 5–15 ವರ್ಷದವರಿಗೆ ಸಂಬಂಧಿಸಿದ ಶಿಫಾರಸನ್ನೂ ಜಾರಿಗೊಳಿಸಲಾಗುವುದು’ ಎಂದರು.

‘ಸದ್ಯ, ಲಸಿಕೆಯ ಸಮಸ್ಯೆಯೇ ಇಲ್ಲ. ಅಗತ್ಯದಷ್ಟು ಡೋಸ್‌ಗಳ ಸಂಗ್ರಹ ಇದೆ’ ಎಂದೂ ಅವರು ಹೇಳಿದರು.

ADVERTISEMENT

‘ಕಳೆದ ವರ್ಷ ಜುಲೈ–ಆಗಸ್ಟ್‌ನಲ್ಲಿ ಸೆರೊ ಸರ್ವೆ (ರಕ್ತದ್ರವದ ಮಾದರಿ ಬಳಸಿ ನಡೆಸಿರುವ ಸಮೀಕ್ಷೆ) ನಡೆಸಲಾಗಿತ್ತು. ದೇಶದಲ್ಲಿ ಶೇ 67ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿರುವುದು ಈ ಸರ್ವೆಯಲ್ಲಿ ಕಂಡುಬಂದಿದೆ. ಈ ಮಕ್ಕಳೆಲ್ಲಾ ಲಕ್ಷಣರಹಿತರಾಗಿಯೇ ಇದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.