ADVERTISEMENT

Cyclone Hamoon: ತೀವ್ರ ಸ್ವರೂಪ ತಾಳಿದ 'ಹಮೂನ್' ಚಂಡಮಾರುತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2023, 4:23 IST
Last Updated 24 ಅಕ್ಟೋಬರ್ 2023, 4:23 IST
<div class="paragraphs"><p>'ಹಮೂನ್' ಚಂಡಮಾರುತ</p></div>

'ಹಮೂನ್' ಚಂಡಮಾರುತ

   

ಚಿತ್ರ ಕೃಪೆ: @Indiametdept

ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ 'ಹಮೂನ್' ಚಂಡಮಾರುತ ತೀವ್ರ ಸ್ವರೂಪ ತಾಳಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ADVERTISEMENT

ಬಂಗಾಳ ಕೊಲ್ಲಿಯಲ್ಲಿ ವಾಯುಭಾರತ ಕುಸಿತದ ಬೆನ್ನಲ್ಲೇ ಚಂಡಮಾರುತ ಸೃಷ್ಟಿಯಾಗಿದೆ. ಆದರೆ ಇದು ಭಾರತೀಯ ಕರಾವಳಿ ಪ್ರದೇಶದಲ್ಲಿ ಪರಿಣಾಮ ಬೀರುವ ಸಾಧ್ಯತೆ ವಿರಳವಾಗಿದೆ ಎಂದು ಐಎಂಡಿ ತಿಳಿಸಿದೆ.

ಹಮೂನ್ ಚಂಡಮಾರುತ ಗಂಟೆಗೆ 21 ಕಿ.ಮೀ. ವೇಗ ಪಡೆದಿದ್ದು, ಬಂಗಾಳಕೊಲ್ಲಿಯ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.

ಮುಂದಿನ ಆರು ತಾಸಿನೊಳಗೆ 'ಹಮೂನ್' ಚಂಡಮಾರುತ ಅತಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಈಶಾನ್ಯದತ್ತ ಚಲಿಸುವಾಗ ಕ್ರಮೇಣ ದುರ್ಬಗೊಳ್ಳಲಿದೆ. ಈ ವೇಳೆ ಗಂಟೆಗೆ 65ರಿಂದ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು ಎಂದು ಐಎಂಡಿ ಹೇಳಿದೆ.

ಚಂಡಮಾರುತವು ಅಕ್ಟೋಬರ್ 25ರ ಸಂಜೆಯ ವೇಳೆಗೆ ಬಾಂಗ್ಲಾದೇಶದ ಕರಾವಳಿ ಖೇಪುಪಾರಾ ಮತ್ತು ಚಿತ್ತಗಾಂಗ್ ಪ್ರದೇಶವನ್ನು ದಾಟಲಿದೆ.

ಇರಾನ್ ದೇಶವು ಈ ಚಂಡಮಾರುತಕ್ಕೆ 'ಹಮೂನ್' ಎಂದು ಹೆಸರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.