ADVERTISEMENT

ಗಣರಾಜ್ಯೋತ್ಸವ ದಿನದ ಹಿಂಸಾಚಾರದ ಸ್ಥಳಕ್ಕೆ ಆರೋಪಿಗಳಾದ ದೀಪ್ ಸಿಧು, ಇಕ್ಬಾಲ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 8:54 IST
Last Updated 13 ಫೆಬ್ರುವರಿ 2021, 8:54 IST
ದೀಪ್ ಸಿಧು: ಫೇಸ್ಬುಕ್ ಚಿತ್ರ
ದೀಪ್ ಸಿಧು: ಫೇಸ್ಬುಕ್ ಚಿತ್ರ   

ನವದೆಹಲಿ: ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಗಳಾದ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ ಅವರನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ತನಿಖೆಯಭಾಗವಾಗಿ, ಹಿಂಸಾಚಾರ ನಡೆದ ದಿನ ಕೆಂಪುಕೋಟೆಗೆ ತೆರಳಲು ಆರೋಪಿಗಳು ಅನುಸರಿಸಿದ ಮಾರ್ಗದಲ್ಲೇ ಅವರನ್ನು ದೆಹಲಿ ಪೊಲೀಸರು ಕರೆದುಕೊಂಡು ಹೋಗಿದ್ದು, ಮಾಹಿತಿ ಕಲೆ ಹಾಕಿದ್ದಾರೆ.

ದೆಹಲಿಯ ಚಾಣಾಕ್ಯಪುರಿಯಲ್ಲಿರುವ ದೆಹಲಿ ಅಪರಾಧ ದಳದ ಕೇಂದ್ರ ಕಚೇರಿಯಿಂದ ಅವರನ್ನು ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುಬರಿ 10ರಂದು ಆರೋಪಿ ಇಕ್ಬಾಲ್‌ ಸಿಂಗ್‌ ಅವರನ್ನು ಪಂಜಾಬ್‌ನ ಹೋಶಿಯಾರ್‌ಪುರನಲ್ಲಿ ಬಂಧಿಸಲಾಗಿತ್ತು. ಇದಕ್ಕೂಮುನ್ನ ದೀಪ್ ಸಿಧು ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.