ADVERTISEMENT

ವಿಷಪೂರಿತ ಎಲೆ ತಿಂದು 31 ಜಿಂಕೆಗಳ ಸಾವು

ಪಿಟಿಐ
Published 4 ನವೆಂಬರ್ 2018, 20:16 IST
Last Updated 4 ನವೆಂಬರ್ 2018, 20:16 IST

ತಿರುಚಿನಾಪಳ್ಳಿ (ತಮಿಳುನಾಡು): ಇಲ್ಲಿನ ಉದ್ಯಾನದಲ್ಲಿ ಕಳೆದ ಕೆಲವು ದಿನಗಳಲ್ಲಿ ವಿಷಪೂರಿತ ಸುಬಾಬುಲ್ ಎಲೆಗಳನ್ನು ತಿಂದು 31 ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಈ ಎಲೆಗಳಲ್ಲಿ ವಿಷಯುಕ್ತ ಅಮಿನೊ ಆಮ್ಲ ಇದ್ದುದರಿಂದ ಜಿಂಕೆಗಳಿಗೆ ಅಜೀರ್ಣದ ತೊಂದರೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಸಬಾಬುಲ್‌ ಎಲೆಗಳನ್ನು ಜಿಂಕೆಗಳು ತಿಂದಿವೆ. ಇವುಗಳಲ್ಲಿ ಪ್ರೊಟೀನ್‌ ಮತ್ತು ಮಿಮುಸಿನ್‌ ಭಾರಿ ಪ್ರಮಾಣದಲ್ಲಿ ಇರುತ್ತದೆ.

ಇದೇ 1ರಂದು 17 ಜಿಂಕೆಗಳು ಮೃತಪಟ್ಟರೆ, ಮಾರನೇ ದಿನ 8 ಹಾಗೂ ನಂತರ ಇನ್ನುಳಿದವು ಸಾವನ್ನಪ್ಪಿವೆ.
ಇವುಗಳಲ್ಲಿ 25 ಹೆಣ್ಣು ಜಿಂಕೆಗಳಿದ್ದವು. ಅವುಗಳ ಪೈಕಿ ಕೆಲವು ಗರ್ಭ ಧರಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉದ್ಯಾನದಲ್ಲಿ ಒಟ್ಟು 180 ಜಿಂಕೆಗಳಿದ್ದವು. ಇದೀಗ ಅಧಿಕಾರಿಗಳು ಉಳಿದ ಜಿಂಕೆಗಳ ಆರೈಕೆ ಕಡೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.