ADVERTISEMENT

ಮಾನನಷ್ಟ ಮೊಕದ್ದಮೆ: ದೆಹಲಿ ಸಿಎಂ ಅತಿಶಿ, ಸಂಜಯ್‌ ಸಿಂಗ್‌ಗೆ ನೋಟಿಸ್‌

ಪಿಟಿಐ
Published 16 ಜನವರಿ 2025, 10:21 IST
Last Updated 16 ಜನವರಿ 2025, 10:21 IST
<div class="paragraphs"><p>ಅತಿಶಿ ಮತ್ತು&nbsp;ಸಂಜಯ್ ಸಿಂಗ್</p></div>

ಅತಿಶಿ ಮತ್ತು ಸಂಜಯ್ ಸಿಂಗ್

   

ನವದೆಹಲಿ: ಕಾಂಗ್ರೆಸ್‌ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ನೋಟೀಸ್ ನೀಡಿದೆ.

ಜನವರಿ 27ರ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಪಾರಸ್‌ ದಲಾಲ್‌, ಈ ಇಬ್ಬರು ನಾಯಕರಿಗೆ ಸೂಚಿಸಿದ್ದಾರೆ.

ADVERTISEMENT

‘ಉದ್ದೇಶಪೂರ್ವಕವಾಗಿ ನನ್ನ ಹೆಸರಿಗೆ ಮಸಿ ಬಳಿಯಲು ಅತಿಶಿ ಮತ್ತು ಸಿಂಗ್ ಯತ್ನಿಸಿದ್ದರು’ ಎಂದು ದೀಕ್ಷಿತ್ ಆರೋಪಿಸಿದ್ದಾರೆ.

‘ನಾನು(ದೀಕ್ಷಿತ್) ಬಿಜೆಪಿಯಿಂದ ಕೋಟ್ಯಾಂತರ ರೂಪಾಯಿ ಪಡೆದುಕೊಂಡಿದ್ದಲ್ಲದೇ, ಎಎಪಿಯನ್ನು ಸೋಲಿಸಲು ಬಿಜೆಪಿ ಜೊತೆ ಕಾಂಗ್ರೆಸ್‌ ಶಾಮೀಲಾಗಿದೆ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಅತಿಶಿ ಮತ್ತು ಸಿಂಗ್ ಆರೋಪಿಸಿದ್ದರು’ ಎಂದು ದೀಕ್ಷಿತ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಂದೀಪ್ ದೀಕ್ಷಿತ್ ಅವರು ಕಣಕ್ಕಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.