ADVERTISEMENT

ಸೇನೆಯ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮೆಚ್ಚುಗೆ

ಪಿಟಿಐ
Published 28 ಅಕ್ಟೋಬರ್ 2020, 11:56 IST
Last Updated 28 ಅಕ್ಟೋಬರ್ 2020, 11:56 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿನ ಪ್ರಸ್ತುತ ಭದ್ರತಾ ವಾತಾವರಣವನ್ನು ಸೇನೆ ನಿಭಾಯಿಸುತ್ತಿರುವ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳ ಮಟ್ಟದ ನಾಲ್ಕು ದಿನಗಳ ಸಮಾವೇಶದಲ್ಲಿ ಮಾತನಾಡಿದ ಅವರು, ‌‌‘ದೇಶದ ಭದ್ರತಾ ವ್ಯವಸ್ಥೆಗಾಗಿ ಸೇನೆ ಕೈಗೊಂಡಿರುವ ಕ್ರಮಗಳ ಕುರಿತು ಹೆಮ್ಮೆ ಇದೆ’ ಎಂದರು.

‘ಭಯೋತ್ಪಾದನೆ, ದಂಗೆ ಅಥವಾ ಯಾವುದೇ ಬಾಹ್ಯ ದಾಳಿ ಮತ್ತು ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ಸೈನ್ಯವು ಮಹತ್ವದ ಪಾತ್ರ ವಹಿಸಿದೆ. ಸುಧಾರಣೆಗಳ ಹಾದಿಯಲ್ಲಿ ಸೈನ್ಯವನ್ನು ಮುನ್ನಡೆಸಲು ಮತ್ತು ಸೇನೆಯ ಯಶಸ್ಸಿಗೆ ನೆರವು ನೀಡಲು ರಕ್ಷಣಾ ಸಚಿವಾಲಯ ಬದ್ಧವಾಗಿದೆ’ ಎಂದು ಸಚಿವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.