ಭಾರತೀಯ ಸೇನೆ
ನವದೆಹಲಿ: ಭದ್ರತಾ ಪಡೆಗಳ ಬಲ ಹೆಚ್ಚಿಸುವ ನಿಟ್ಟಿನಲ್ಲಿ ₹1.05 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ರಕ್ಷಣಾ ವ್ಯವಸ್ಥೆಗಳು, ಸೇನಾ ವಾಹನಗಳನ್ನು ಖರೀದಿಸುವ ಯೋಜನೆಗೆ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯು (ಡಿಎಸಿ) ಯೋಜನೆಗೆ ಅಂಕಿತ ನೀಡಿದೆ. ಶಸ್ತ್ರಸಜ್ಜಿತ ವಾಹನಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು, ಸೂಪರ್ ರ‍್ಯಾಪಿಡ್ ಗನ್‌ಗಳು, ಸ್ವಯಂಚಾಲಿತ ಜಲಂತರ್ಗಾಮಿಗಳ ಖರೀದಿಯನ್ನೂ ಈ ಯೋಜನೆ ಒಳಗೊಂಡಿದೆ.
ಈ ಖರೀದಿಯೊಂದಿಗೆ ಭದ್ರತಾಪಡೆಗಳ ಯುದ್ಧ ಸನ್ನದ್ಧತೆ ಹೆಚ್ಚಾಗುವುದಲ್ಲದೇ, ವಾಯು ರಕ್ಷಣೆಯಲ್ಲೂ ಮಹತ್ತರ ಬದಲಾವಣೆ ಸಾಧ್ಯವಾಗಲಿದೆ. ಸರಕು ಸಾಗಣೆ ಹಡಗುಗಳಿಗೆ ಎದುರಾಗುತ್ತಿರುವ ಭದ್ರತಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಭದ್ರತಾ ಪಡೆಗಳ ಮೂರು ವಿಭಾಗದಲ್ಲೂ ಸಮರ್ಪಕ ನಿರ್ವಹಣೆ, ಪೂರೈಕೆ ಸರಪಳಿಯಲ್ಲಿನ ಸಮತೋಲನವನ್ನೂ ಈ ಯೋಜನೆ ಖಾತರಿಪಡಿಸಲಿದೆ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.