ನವದೆಹಲಿ: ಭಾರತದ ರಕ್ಷಣಾ ವಲಯದ ಉತ್ಪಾದನೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದು, 2024–25ನೇ ಸಾಲಿನಲ್ಲಿ ₹ 1,50,590 ಕೋಟಿಗೆ ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡ 18ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷ ₹1.27 ಲಕ್ಷ ಕೋಟಿಯಷ್ಟು ಮೌಲ್ಯದ ಉತ್ಪಾದನೆ ಆಗಿತ್ತು. 2019–20ರ ಸಾಲಿಗೆ ಹೋಲಿಸಿದರೆ ಶೇಕಡ 90ರಷ್ಟು ವೃದ್ಧಿ ಕಂಡಿದೆ. ಆಗ ₹79,071 ಕೋಟಿಯಷ್ಟು ಉತ್ಪಾದನೆಯಾಗಿತ್ತು ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ರಕ್ಷಣಾ ಇಲಾಖೆಯ ಉತ್ಪಾದನಾ ವಿಭಾಗ, ಎಲ್ಲ ಪಾಲುದಾರರು, ರಕ್ಷಣಾ ಕ್ಷೇತ್ರದ ಸಾರ್ವಜನಿಕ ಉದ್ದಿಮೆ ವಲಯ, ಖಾಸಗಿ ಕೈಗಾರಿಕೆಗಳ ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಭಾರತದ ರಕ್ಷಣಾ ವಲಯದ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಬಲಗೊಳ್ಳುತ್ತಿದೆ ಎನ್ನುವುದರ ಸ್ಪಷ್ಟ ಮುನ್ಸೂಚನೆ ಇದು’ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.