ಗಡೀಪಾರು
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶೀಯರು, ಮ್ಯಾನ್ಮಾರ್‌ನ ರೋಹಿಂಗ್ಯಾಗಳು, ನೈಜೀರಿಯನ್ನರು ಸೇರಿದಂತೆ 71 ವಿದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಗಡೀಪಾರು ಮಾಡಿದ್ದಾರೆ.
ದ್ವಾರಕಾದ ವಿವಿಧ ಠಾಣೆಗಳ ಪೊಲೀಸರು ಬಾಂಗ್ಲಾದೇಶದ 47 ಮಂದಿ, 17 ರೋಹಿಂಗ್ಯಾಗಳು ಹಾಗೂ ನೈಜೀರಿಯದ 7 ಮಂದಿಯನ್ನು ಬಂಧಿಸಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಾಜರುಪಡಿಸಿದರು.
ಉತ್ತಮ ನಗರ, ಚಾವ್ಲಾದ ವಿವಿಧ ಘಟಕಗಳು ಹಾಗೂ ಪೊಲೀಸ್ ಠಾಣೆಗಳ ಸಂಘಟಿತ ಕಾರ್ಯಾಚರಣೆ ಮೂಲಕ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರನ್ನು ಪತ್ತೆ ಮಾಡಲಾಯಿತು. ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ, ವೀಸಾ ಇಲ್ಲದೆ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಮಾಡಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.