ADVERTISEMENT

ದೆಹಲಿ: 5ನೇ ತರಗತಿವರೆಗೆ ಹೈಬ್ರಿಡ್ ಪಾಠ

ಪಿಟಿಐ
Published 11 ನವೆಂಬರ್ 2025, 14:55 IST
Last Updated 11 ನವೆಂಬರ್ 2025, 14:55 IST
ದೆಹಲಿಯಲ್ಲಿ ವಾಯು ಮಾಲಿನ್ಯ ಖಂಡಿಸಿ ನಡೆಸಲಾದ ಪ್ರತಿಭಟನೆ (ಪಿಟಿಐ ಚಿತ್ರ)
ದೆಹಲಿಯಲ್ಲಿ ವಾಯು ಮಾಲಿನ್ಯ ಖಂಡಿಸಿ ನಡೆಸಲಾದ ಪ್ರತಿಭಟನೆ (ಪಿಟಿಐ ಚಿತ್ರ)   

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಗಣನೀಯವಾಗಿ ಏರಿಕೆಯಾದ ಕಾರಣ, 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸುವಂತೆ ದೆಹಲಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 3ನೇ ಹಂತದ ಅಡಿಯಲ್ಲಿ ಮಾಲಿನ್ಯ ವಿರೋಧಿ ನಿರ್ಬಂಧಗಳನ್ನು ಜಾರಿಗೆ ತಂದ ನಂತರ ಈ ಆದೇಶ ಬಂದಿದೆ.

ಹೈಬ್ರಿಡ್ ಮಾದರಿಯ ತರಗತಿಗಳನ್ನು ಆನ್‌ಲೈನ್ ಮತ್ತು ಸಾಂಪ್ರದಾಯಿಕ ಭೌತಿಕ ತರಗತಿ ಎರಡರ ಸಂಯೋಜನೆಯಲ್ಲಿ ನಡೆಸಲಾಗುತ್ತದೆ.

ದೆಹಲಿಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಮುಖ್ಯಸ್ಥರಿಗೆ ಶಿಕ್ಷಣ ನಿರ್ದೇಶನಾಲಯ ಈ ಆದೇಶ ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಭೌತಿಕವಾಗಿ ಮತ್ತು ಸಾಧ್ಯವಿರುವಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುವಂತೆ ಆದೇಶಿಸಿದೆ.

ADVERTISEMENT

ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸೋಮವಾರ 362ರಿಂದ ಮಂಗಳವಾರ 425ಕ್ಕೆ ಏರಿಕೆಯಾಗಿದೆ. ಇದರ ನಂತರ ಕೇಂದ್ರ ಸರ್ಕಾರ ಜಿಆರ್‌ಎಪಿ 3ನೇ ಹಂತದ ನಿರ್ಬಂಧಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.