ADVERTISEMENT

ಕೇಜ್ರಿವಾಲ್‌ ವಿರುದ್ಧ ಪೊಲೀಸರಿಗೆ ದೂರು: ವೀರೇಂದ್ರ ಸಚ್‌ದೇವ್‌

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 13:51 IST
Last Updated 29 ಜನವರಿ 2024, 13:51 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌</p></div>

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌

   

ನವದೆಹಲಿ: ಎಎಪಿಯ ಏಳು ಮಂದಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾಡಿರುವ ಆರೋಪದ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್‌ ಅವರು ಸೋಮವಾರ ತಿಳಿಸಿದರು.

ವಿರೋಧಪಕ್ಷದ ನಾಯಕ ರಾಮ್‌ವೀರ್‌ ಬಿಧೂರಿ ಅವರ ನೇತೃತ್ವದ ಬಿಜೆಪಿ ಶಾಸಕರ ನಿಯೋಗವು ದೆಹಲಿ ಪೊಲೀಸ್‌ ಕಮಿಷನರ್‌ಗೆ ಮಂಗಳವಾರ ದೂರು ಸಲ್ಲಿಸಲಿದೆ ಎಂದು ಹೇಳಿದರು.

ADVERTISEMENT

ಪಕ್ಷ ತೊರೆಯಲು ಎಎಪಿಯ ಏಳು ಮಂದಿ ಶಾಸಕರಿಗೆ ಬಿಜೆಪಿಯು ತಲಾ ₹25 ಕೋಟಿ ನೀಡುವ ಆಮಿಷವೊಡ್ಡಿದೆ ಎಂದು ಕೇಜ್ರಿವಾಲ್‌ ಅವರು ಈಚೆಗೆ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.