ನವದೆಹಲಿ: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಕುಸಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ₹5 ಲಕ್ಷ ಪರಿಹಾರ ಘೋಷಿಸಿದೆ.
ಮೃತ ವ್ಯಕ್ತಿ ಮನೋಜ್ ಶರ್ಮಾ (46) ಇದೇ ಕಟ್ಟಡದಲ್ಲಿದ್ದ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು (ಶುಕ್ರವಾರ) ಕಟ್ಟಡ ಕುಸಿದ ಪರಿಣಾಮ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದ ಇವರನ್ನು ಹೊರಕ್ಕೆ ತೆಗೆದು, ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಶರ್ಮಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಪಶ್ಚಿಮ ಜನಕಪುರಿ–ಆರ್‌ಕೆ ಆಶ್ರಮ ಮಾರ್ಗ ಕಾರಿಡಾರ್‌ಗಾಗಿ ಸುರಂಗ ಕೊರೆಯುವ ಕೆಲಸ ನಡೆಯುತ್ತಿದ್ದು, ಮಿಥೈಪುಲ್ ಪ್ರದೇಶದಲ್ಲಿ ನಸುಕಿನಲ್ಲಿ ಈ ಘಟನೆ ಸಂಭವಿಸಿದೆ. ಕುಸಿದ ಕಟ್ಟಡ ಸೇರಿದಂತೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳನ್ನು ಈಗಾಗಲೇ ಅಸುರಕ್ಷಿತವೆಂದು ಘೋಷಿಸಲಾಗಿತ್ತು. ಜೂನ್ 12ರಂದು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಬೇಕು ಎಂದು ತಿಳಿಸಿತ್ತು ಎಂದು ಡಿಎಂಆರ್‌ಸಿಪ್ರಕಟಯಲ್ಲಿ ಹೇಳಿದೆ.
ಈ ಘಟನೆಯಲ್ಲಿ ಇತರ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಕಟ್ಟಡದ ಕಳಪೆ ನಿರ್ವಹಣೆ ಮತ್ತು ಅಜಾಗರೂಕತೆಯಿಂದ ಸಂಭವಿಸಿದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.