ADVERTISEMENT

ದೆಹಲಿ: ವಕೀಲರಿಗೆ ವಿಮಾ ಭದ್ರತೆ ಕಲ್ಪಿಸಲು ₹ 40 ಕೋಟಿ

ಪಿಟಿಐ
Published 30 ಅಕ್ಟೋಬರ್ 2020, 12:54 IST
Last Updated 30 ಅಕ್ಟೋಬರ್ 2020, 12:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಕೀಲರಿಗೆ ವಿಮಾ ಭದ್ರತೆ ಒದಗಿಸಲು ₹ 40 ಕೋಟಿ ಒದಗಿಸುವ ಪ್ರಸ್ತಾವಕ್ಕೆ ದೆಹಲಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ₹ 5 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ ಮತ್ತು ₹ 10 ಲಕ್ಷ ಮೌಲ್ಯದ ನಿಶ್ಚಿತ ವಿಮೆ ಒದಗಿಸುವುದು ಇದರ ಉದ್ದೇಶ.

ದೆಹಲಿಯಲ್ಲಿ ವಾಸವಿರುವ ವಕೀಲರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ. ಮುಖ್ಯಮಂತ್ರಿಗಳ ವಕೀಲರ ಕಲ್ಯಾಣ ಯೋಜನೆಯಡಿ ವಿಮೆ ಭದ್ರತೆ ಒದಗಿಸಲಾಗುವುದು ಎಂದು ಕಾನೂನುಸಚಿವ ಕೈಲಾಶ್ ಗೆಹ್ಲೋಟ್ ಶುಕ್ರವಾರ ತಿಳಿಸಿದರು.

ಮುಖ್ಯಮಂತ್ರಿ ಅವರು ಕಳೆದ ಬಜೆಟ್‌ನಲ್ಲಿ ಈ ಯೋಜನೆಗಾಗಿ ₹ 50 ಕೋಟಿ ಒದಗಿಸುವ ಭರವಸೆ ನೀಡಿದ್ದರು. ಯೋಜನೆ ಅನುಷ್ಠಾನದ ಅಂತಿಮ ಹೆಜ್ಜೆಯಾಗಿ ದೆಹಲಿ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ವಿವರಿಸಿದರು.

ADVERTISEMENT

ಸುಪ್ರೀಂ ಕೋರ್ಟ್‌ನ ವಕೀಲರ ಸಂಘದ ಅಧ್ಯಕ್ಷ ರಾಕೇಶ್‌ ಕುಮಾರ್ ಖನ್ನಾ ಅವರ ಅಧ್ಯಕ್ಷತೆಯಲ್ಲಿ ಯೋಜನೆ ಜಾರಿ ಕುರಿತಂತೆ ಅಗತ್ಯ ಸಲಹೆ ನೀಡಲು ಕಳೆದ ವರ್ಷ 13 ಸದಸ್ಯರ ಸಮಿತಿಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.