
ಪಿಟಿಐ
ನವದೆಹಲಿ: ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ 8ನೇ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.
‘ಜಮ್ಮು–ಕಾಶ್ಮೀರದ ಬಾರಾಮುಲ್ಲಾ ನಿವಾಸಿ ಡಾ.ಬಿಲಾಲ್ ನಾಸೀರ್ ಮಲ್ಲನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
‘ಕಾರು ಸ್ಫೋಟದಲ್ಲಿ ಮೃತಪಟ್ಟಿರುವ ಆರೋಪಿ ಉಮರ್ ನಬಿಗೆ ಬಿಲಾಲ್ ಆಶ್ರಯ ಮತ್ತು ಸಹಕಾರ ನೀಡಿದ್ದ. ಸ್ಫೋಟದ ಬಳಿಕ ಸಾಕ್ಷ್ಯ ಕೃತ್ಯದಲ್ಲಿಯೂ ಭಾಗಿಯಾಗಿದ್ದ’ ಎಂದು ಎನ್‌ಐಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.