ADVERTISEMENT

ಶಾಲೆಯಲ್ಲಿ ಸಿಂಧೂರ ಗಿಡ ನೆಟ್ಟ ದೆಹಲಿ ಸಿ.ಎಂ

ಪಿಟಿಐ
Published 9 ಜೂನ್ 2025, 16:27 IST
Last Updated 9 ಜೂನ್ 2025, 16:27 IST
ದೆಹಲಿಯ ಶಾಲಿಮಾರ್‌ ಬಾಗ್‌ನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಂಧೂರ ಗಿಡವನ್ನು ನೆಟ್ಟು, ನೀರುಣಿಸಿದರು – ಪಿಟಿಐ ಚಿತ್ರ
ದೆಹಲಿಯ ಶಾಲಿಮಾರ್‌ ಬಾಗ್‌ನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಂಧೂರ ಗಿಡವನ್ನು ನೆಟ್ಟು, ನೀರುಣಿಸಿದರು – ಪಿಟಿಐ ಚಿತ್ರ   

ನವದೆಹಲಿ: ಸರ್ಕಾರಿ ಶಾಲೆಯೊಂದರಲ್ಲಿ ಸೋಮವಾರ ಸಿಂಧೂರ ಗಿಡ ನೆಟ್ಟ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ‘ನಮ್ಮ ಸೇನೆಯ ಸಾಮರ್ಥ್ಯವು ದೇಶದ ಶಕ್ತಿಯ ಪ್ರತೀಕ’ ಎಂದು ಹೇಳಿದರು.

‘ತಾಯಿಯ ಹೆಸರಲ್ಲಿ ಒಂದು ಗಿಡ 2.0’ ಅಭಿಯಾನಕ್ಕೆ ಶಾಲಿಮಾರ್‌ ಬಾಗ್‌ನ ಶಾಲೆಯೊಂದರಲ್ಲಿ ರೇಖಾ ಗುಪ್ತಾ ಚಾಲನೆ ನೀಡಿದರು.

‘ಇದು ಕೇವಲ ಪರಿಸರ ದಿನದ ಆಚರಣೆಯಲ್ಲ, ತಾಯಂದಿರು, ತಾಯ್ನಾಡು ಮತ್ತು ಪ್ರಕೃತಿಯ ಬಗೆಗಿನ ಭಾವನಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದ್ಧತೆಯಾಗಿದೆ’ ಎಂದು ಹೇಳಿದರು.

ADVERTISEMENT

ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್‌ ಸಿಂಧೂರ’ದ ಸ್ಮರಣೆಗಾಗಿ ಸಿಂಧೂರ ಗಿಡ ನೆಡುವ ಅಭಿಯಾನ ಆರಂಭಗೊಂಡಿದೆ.

‘ಆಪರೇಷನ್‌ ಸಿಂಧೂರ’ದ ಮೂಲಕ ನಮ್ಮ ಸಹೋದರಿಯರ ಘನತೆಯನ್ನು ಎತ್ತಿಹಿಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಪಡೆಗಳಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ರೇಖಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.