ADVERTISEMENT

2020ರ ದೆಹಲಿ ಗಲಭೆ: ಬೆಂಕಿ ಹಚ್ಚಿದ ಆರೋಪ ಹೊತ್ತಿದ್ದ ಫೈಜಾನ್ ಖುಲಾಸೆ

ಪಿಟಿಐ
Published 31 ಜನವರಿ 2026, 14:28 IST
Last Updated 31 ಜನವರಿ 2026, 14:28 IST
   

ನವದೆಹಲಿ: 2020ರ ದೆಹಲಿ ಗಲಭೆಯಲ್ಲಿ ಹಿಂಸಾಚಾರ ನಡೆಸಿದ ಹಾಗೂ ಬೆಂಕಿ ಹಚ್ಚಿದ ಆರೋಪ ಹೊತ್ತಿದ್ದ ಫೈಜಾನ್‌ ಅವರನ್ನು ಇಲ್ಲಿನ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಗಲಭೆಯ ವೇಳೆ ಬ್ರಿಜ್‌ಪುರಿ ರಸ್ತೆಯಲ್ಲಿರುವ ಅರುಣ್ ಮಾಡರ್ನ್‌ ಪಬ್ಲಿಕ್ ಸೀನಿಯರ್ ಸೆಕೆಂಡರಿ ಶಾಲೆಗೆ ಬೆಂಕಿ ಹಚ್ಚಿದ ಆರೋಪವನ್ನು ಫೈಜಾನ್ ಅಲಿಯಾಸ್ ಅರ್ಯಾನ್ ವಿರುದ್ಧ ಹೊರಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪರ್ವೀನ್‌ ಸಿಂಗ್‌ ಅವರು ಅರ್ಯಾನ್‌ ಅವರನ್ನು ದೋಷಮುಕ್ತಗೊಳಿಸಿ ಜ.28ರಂದು ಆದೇಶ ಹೊರಡಿಸಿದ್ದಾರೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರ ಸಾಕ್ಷ್ಯವನ್ನೇ ಅವಲಂಬಿಸಿರುವುದು ಒಳ್ಳೆಯದಲ್ಲ. ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಗಲಭೆ ನಂತರ ತಲೆಮರೆಸಿಕೊಂಡಿದ್ದ ಫೈಜಾನ್‌ ಅವರನ್ನು ಪೊಲೀಸರು 2022ರಲ್ಲಿ ಘೋಷಿತ ಅಪರಾಧಿ ಎಂದಿದ್ದರು. 2025ರ ಆಗಸ್ಟ್‌ನಲ್ಲಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲೇ ಬಂಧಿಸಿದ್ದ ಇಬ್ಬರು ಆರೋಪಿಗಳನ್ನು 2025ರ ಫೆಬ್ರುವರಿಯಲ್ಲಿ ಖುಲಾಸೆಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.