ADVERTISEMENT

ಆಮ್ಲಜನಕ ಕಾನ್ಸಂಟ್ರೇಟರ್‌ ಅಕ್ರಮ ದಾಸ್ತಾನು: ಉದ್ಯಮಿಗೆ ನಿರೀಕ್ಷಣಾ ಜಾಮೀನು ನಕಾರ

ಪಿಟಿಐ
Published 13 ಮೇ 2021, 7:50 IST
Last Updated 13 ಮೇ 2021, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯವೊಂದು ತಿರಸ್ಕರಿಸಿದೆ.

‘ಈ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಂದೀಪ್‌ ಗಾರ್ಗ್‌ ಗುರುವಾರ ಪ್ರಕಟಿಸಿದರು.

ದೆಹಲಿಯಲ್ಲಿ ಈಚೆಗೆ ಆಮ್ಲಜನಕಕ್ಕೆ ತೀವ್ರ ಕೊರತೆ ಉಂಟಾಗಿತ್ತು. ಹಲವಾರು ಕೋವಿಡ್ ಸೋಂಕಿತರು ಆಮ್ಲಜನಕದ ಕೊರತೆಯಿಂದಲೇ ಮೃತಪಟ್ಟಿದ್ದರು. ಆಗ ನಡೆಸಲಾದ ಕಾರ್ಯಾಚರಣೆ ವೇಳೆ ನವನೀತ್‌ ಕಲ್ರಾ ಅವರಿಗೆ ಸೇರಿದ್ದ ಮೂರು ರೆಸ್ಟೋರೆಂಟ್‌ಗಳಲ್ಲಿ 524 ಆಮ್ಲಜನಕ ಕಾನ್ಸಂಟ್ರೇಟರ್‌ಗಳು ಪತ್ತೆಯಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.