
ಇ.ಡಿ
(ಸಂಗ್ರಹ ಚಿತ್ರ)
ನವದೆಹಲಿ: ‘ಜಾರಿ ನಿರ್ದೇಶನಾಲಯವು (ಇ.ಡಿ) ‘ಕಿರುಕುಳ ನೀಡುವ ಸಂಸ್ಥೆ’ಯಂತೆ ಕಾರ್ಯ
ನಿರ್ವಹಿಸುತ್ತಿದ್ದು, ತನ್ನ ಕಕ್ಷಿದಾರರ ವಿರುದ್ಧ ಉದ್ದೇಶಪೂರ್ವಕವಾಗಿ ತನಿಖೆ ಕೈಗೊಂಡಿದೆ’ ಎಂದು ಬಿಆರ್‌ಎಸ್ ನಾಯಕಿ ಕೆ.ಕವಿತಾ ಪರ ವಕೀಲರು ವಿಶೇಷ ಕೋರ್ಟ್‌ಗೆ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಅಭಿಷೇಕ್ ಸಿಂಘ್ವಿ ಅವರು ಸೋಮವಾರ ವಿಶೇಷ ಕೋರ್ಟ್ ಎದುರು ವಾದ ಮಂಡಿಸಿದರು.
‘ಇ.ಡಿ ತನಿಖೆ ನಿಷ್ಪಕ್ಷಪಾತವಾಗಿಲ್ಲ. ತನಿಖೆ ಉದ್ದೇಶಪೂರ್ವಕವಾಗಿದೆ. ‘ಬಂಧಿಸುತ್ತೇವೆ. ಬಂಧಿಸಲಾಗದಿದ್ದರೆ, ಬೆಕ್ಕು–ಇಲಿಯಾಟ ಆಡುತ್ತೇವೆ’ ಎನ್ನುವಂತಿದೆ ಇ.ಡಿ ಕಾರ್ಯಶೈಲಿ. ಬಿಆರ್‌ಎಸ್ ನಾಯಕಿಗೆ ಮತ್ತೆ ಮತ್ತೆ ಸಮನ್ಸ್ ಜಾರಿಯಾಗಿದೆ. ದಿನಕ್ಕೊಂದು ಸಮನ್ಸ್ ನೀಡಿದರೆ ಅದಕ್ಕೆ ಖುಷಿಯಾಗುವುದೋ ಏನೋ’ ಎಂದು ಹೇಳಿದರು.
ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದ್ದು, ಸಿಂಘ್ವಿ ಅಂದು ವಾದ ಮುಂದುವರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.