ಅಗ್ನಿ ಅವಘಡ ಸಂಭವಿಸಿದ ಪೂರ್ವ ದೆಹಲಿಯ ವಿವೇಕ ವಿಹಾರದಲ್ಲಿರುವ ಮಕ್ಕಳ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ತನಿಖೆ ಕೈಗೊಂಡಿತು
–ಪಿಟಿಐ ಚಿತ್ರ
ನವದೆಹಲಿ: ಇಲ್ಲಿನ ಬೇಬಿ ಕೇರ್ ನ್ಯೂಬಾರ್ನ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣದ ವಿಚಾರಣೆಗಾಗಿ ಆಸ್ಪತ್ರೆಯ ಮಾಲೀಕ ಮತ್ತು ವೈದ್ಯರೊಬ್ಬರನ್ನು ನ್ಯಾಯಾಲಯವು ಸೋಮವಾರ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಈ ಪ್ರಕರಣದ ವಿಚಾರಣೆಗಾಗಿ ಆಸ್ಪತ್ರೆಯ ಮಾಲೀಕ ಡಾ. ನವೀನ್ ಕಿಚಿ ಮತ್ತು ಬೆಂಕಿ ಅವಘಡ ಸಂಭವಿಸಿದಾಗ ಕರ್ತವ್ಯದಲ್ಲಿದ್ದ ಡಾ. ಆಕಾಶ್ ಅವರನ್ನು ಮೂರು ದಿನ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯವನ್ನು ಕೋರಿದರು. ಈ ಕುರಿತ ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ಭಾನುವಾರ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.