
ದೆಹಲಿಯಲ್ಲಿ ಸೋಮವಾರ (ನ.10) ಸ್ಫೋಟ ಸಂಭವಿಸಿರುವ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು
ಕೆಂಪು ಕೋಟೆಯ ಬಳಿ ಸೋಮವಾರ ಸಂಭವಿಸಿದ ಸ್ಫೋಟವು ಕಳೆದ ಎರಡು ದಶಕಗಳಲ್ಲಿ ದೆಹಲಿಯನ್ನು ಬೆಚ್ಚಿಬೀಳಿಸಿದ ಅನೇಕ ಸ್ಫೋಟ ಘಟನೆಗಳನ್ನು ಮತ್ತೊಮ್ಮೆ ನೆನಪಿಸಿದೆ. 1997ರ ಬಳಿಕ ರಾಷ್ಟ್ರದ ರಾಜಧಾನಿಯಲ್ಲಿ ನಡೆದ ಪ್ರಮುಖ ಸ್ಫೋಟಗಳ ವಿವರ ಇಲ್ಲಿದೆ:
1997, ಅ.10: ಶಾಂತಿವನ, ಕೌಢಿಯಾ ಪುಲ್ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶಗಳಲ್ಲಿ ಸಂಭವಿಸಿದ ಮೂರು ಬಾಂಬ್ ಸ್ಫೋಟದಲ್ಲಿ ಒಬ್ಬ ಮೃತಪಟ್ಟು, 16 ಮಂದಿಗೆ ಗಾಯ
1997, ಅ.20: ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ನಡೆದ ಅವಳಿ ಸ್ಫೋಟದಲ್ಲಿ ಒಬ್ಬ ಸಾವು; 34 ಮಂದಿಗೆ ಗಾಯ
1997, ನ.30: ಕೆಂಪು ಕೋಟೆಯ ಬಳಿ ನಡೆದ ಅವಳಿ ಸ್ಫೋಟದಲ್ಲಿ ಒಬ್ಬ ಸಾವು; 70ಕ್ಕೂ ಅಧಿಕ ಮಂದಿಗೆ ಗಾಯ
1997, ಡಿ.30: ಬಸ್‌ನಲ್ಲಿಟ್ಟಿದ್ದ ಬಾಂಬ್ ಪಂಜಾಬಿ ಬಾಗ್ ಬಳಿ ಸ್ಫೋಟಗೊಂಡು ನಾಲ್ವರು ಪ್ರಯಾಣಿಕರು ಮೃತಪಟ್ಟು, 30ಕ್ಕೂ ಅಧಿಕ ಮಂದಿಗೆ ಗಾಯ
1998, ಜುಲೈ 26: ಕಾಶ್ಮೀರಿ ಗೇಟ್ ಬಳಿ ನಿಲ್ಲಿಸಿದ್ದ ಐಎಸ್‌ಬಿಟಿ ಬಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರ ಸಾವು
2000, ಜೂನ್ 18: ಕೆಂಪು ಕೋಟೆ ಬಳಿ ಸಂಭವಿಸಿದ ಎರಡು ಪ್ರಬಲ ಸ್ಫೋಟಕ್ಕೆ ಎಂಟು ವರ್ಷದ ಬಾಲಕಿ ಸೇರಿ ಇಬ್ಬರ ಬಲಿ
2005, ಮೇ 22: ಎರಡು ಚಿತ್ರಮಂದಿರಗಳಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, 60ಕ್ಕೂ ಅಧಿಕ ಮಂದಿಗೆ ಗಾಯ
2005, ಅ.29: ಸರೋಜಿನಿನಗರ, ಪಹಾಢ್‌ಗಂಜ್ ಮಾರುಕಟ್ಟೆ ಹಾಗೂ ಗೋವಿಂದಪುರ ಪ್ರದೇಶದ ಬಸ್‌ನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಕೆಲವು ವಿದೇಶಿಯರು ಸೇರಿ 60ಕ್ಕೂ ಅಧಿಕ ಸಾವು; ದೆಹಲಿಯನ್ನು ನಡುಗಿಸಿದ ಈ ಘಟನೆಯಲ್ಲಿ 100ಕ್ಕೂ ಅಧಿಕ ಮಂದಿಗೆ ಗಾಯ
2006, ಏ.14: ಹಳೆ ದೆಹಲಿಯ ಜಾಮಾ ಮಸೀದಿ ಬಳಿ ನಡೆದ ಅವಳಿ ಸ್ಫೋಟದಲ್ಲಿ 14 ಮಂದಿಗೆ ಗಾಯ
2008, ಸೆ.13: ಕಾನಾಟ್ ಪ್ಲೇಸ್, ಕರೋಲ್ ಬಾಗ್‌ನ ಗಫಾರ್ ಮಾರುಕಟ್ಟೆ ಮತ್ತು ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಮಾರುಕಟ್ಟೆಯಲ್ಲಿ 45 ನಿಮಿಷಗಳ ಅಂತರದಲ್ಲಿ ಸಂಭವಿಸಿದ ಐದು ಸ್ಫೋಟಗಳಲ್ಲಿ 25 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯ
2008, ಸೆ.27: ಕುತುಬ್ ಮಿನಾರ್ ಬಳಿಯ ಮೆಹ್ರೌಲಿ ಹೂವಿನ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರ ಸಾವು; 21 ಮಂದಿಗೆ ಗಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.